ಸಂತೆಶಿವರ ಕೆರೆ ಅಭಿವೃದ್ಧಿಗೆ ಅನುದಾನ

 ಸಂತೆ ಶಿವರ ಗ್ರಾಮದ ಮುಂಭಾಗದ ದೊಡ್ಡಕೆರೆ ತುಂಬಿ ಹರಿದ ಹಿನ್ನೆಲೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಎಸ್ ಎಲ್ ಭೈರಪ್ಪ ಅವರ ಪುತ್ರ ಉದಯ್ ಶಂಕರ್ ದೋಣಿಯಲ್ಲಿ ತೆರಳಿ ಬಾಗಿನ ಅರ್ಪಿಸಿದರು. ಯೋಗೇಶ್, ಚಿರಂಜೀವಿ,  ಪಿ. ವೀರೇಶ್, ಕಂಡಕ್ಟರ್ ಸತೀಶ್, ಗುಡಿ ಗೌಡ  ರವೀಶ್, ಇದ್ದರು.
ಸಂತೆ ಶಿವರ ಗ್ರಾಮದ ಮುಂಭಾಗದ ದೊಡ್ಡಕೆರೆ ತುಂಬಿ ಹರಿದ ಹಿನ್ನೆಲೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಎಸ್ ಎಲ್ ಭೈರಪ್ಪ ಅವರ ಪುತ್ರ ಉದಯ್ ಶಂಕರ್ ದೋಣಿಯಲ್ಲಿ ತೆರಳಿ ಬಾಗಿನ ಅರ್ಪಿಸಿದರು. ಯೋಗೇಶ್, ಚಿರಂಜೀವಿ, ಪಿ. ವೀರೇಶ್, ಕಂಡಕ್ಟರ್ ಸತೀಶ್, ಗುಡಿ ಗೌಡ ರವೀಶ್, ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ
  • ಗಂಗಾ ಪೂಜೆ, ಬಾಗಿನ ಅರ್ಪಣೆ
ನುಗ್ಗೇಹಳ್ಳಿ: ಹೋಬಳಿಯ ಸಂತೆಶಿವರ ಗ್ರಾಮದ ದೊಡ್ಡಕೆರೆಗೆ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಪುತ್ರ ಉದಯಶಂಕರ್ ಗಂಗಾಧರೇಶ್ವರ ದೇವಾಲಯದ ಮುಂಭಾಗದ ಮಧ್ಯೆ ಕೆರೆಗೆ ದೋಣಿಯಲ್ಲಿ ತೆರಳಿ ಶುಕ್ರವಾರ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಶಾಸಕ ಸಿ.ಎನ್.ಬಾಲಕೃಷ್ಣ, ಸಾಹಿತಿ ಎಸ್.ಎಲ್.ಭೈರಪ್ಪ ಅವರು ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂತೆಶಿವರ ನನ್ನ ಹುಟ್ಟೂರಿನ ಕೆರೆಯನ್ನು ಹೇಮಾವತಿ ನೀರಾವರಿ ಯೋಜನೆಯಿಂದ ತುಂಬಿಸುವಂತೆ ಮನವಿ ಮಾಡಿದ್ದರು. ಕೂಡಲೇ ಮುಖ್ಯಮಂತ್ರಿಗಳು ಸರ್ಕಾರದ ಅನುಮೋದನೆ ನೀಡಿದ್ದರು. ನಂತರ ಬಸವರಾಜ ಬೊಮ್ಮಾಯಿ ಅವರು ಹಣ ಬಿಡುಗಡೆ ಮಾಡಿಸಿ ಕಾರ್ಯಯೋಜನೆ ಪೂರ್ಣಗೊಳಿಸಿದರು. ಭೈರಪ್ಪನವರು ಬದುಕಿದ್ದಾಗಲೇ ಈ ಕೆರೆಗೆ ನೀರು ಹರಿಸಲು ಚಾಲನೆ ನೀಡಿದ್ದರು. ಅವರ ಇಷ್ಟದಂತೆ ಅವರ ಪತ್ನಿ ಸರಸ್ವತಿ ಅಮ್ಮ ಹಾಗೂ ಅವರ ಪುತ್ರ ಉದಯಶಂಕರ್ ಜತೆ ಕೆರೆ ತುಂಬಿದ ನಂತರ ಭೈರಪ್ಪನವರ ಕುಟುಂಬದ ಜತೆ ಬಾಗಿನ ಅರ್ಪಿಸಿದ್ದೇನೆ ಎಂದರು.
ಸರಾಗವಾಗಿ ನೀರು ಅರಿಯಲು ಪೈಪ್ ಲೈನ್ ಅಳವಡಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಸರ್ಕಾರದಿಂದ 2 ಕೋಟಿ ರೂ.ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಿದ್ದೇನೆ. ಆಂಜನೇಯ ಸ್ವಾಮಿ ಹಾಗೂ ಮಲ್ಲೇಶ್ವರ ಸ್ವಾಮಿ ದೇಗುಲಗಳ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸುವುದಾಗಿ ಶಾಸಕರು ಭರವಸೆ ನೀಡಿದರು.
ಮೈಸೂರು ಎನ್‌ಐ ಕಾಲೇಜಿನ ಮುಖ್ಯಸ್ಥ ಎಸ್.ಬಿ ಉದಯಶಂಕರ್ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಮಾಜ ಸೇವೆಯಲ್ಲಿಯೂ ನಮ್ಮ ತಂದೆ ಭೈರಪ್ಪ ತೊಡಗಿಸಿಕೊಂಡಿದ್ದರು. ಸಂತೆಶಿವರ ವ್ಯಾಪ್ತಿಯ ಕೆರೆಗಳಿಗೆ ನೀರು ತರಲು ಆದ್ಯತೆ ನೀಡಿದ್ದರು. ಅದರ ಫಲವಾಗಿ 1 ವರ್ಷದಲ್ಲಿ ವ್ಯಾಪ್ತಿಯ ಕೆರೆ ಕಟ್ಟೆಗಳು ತುಂಬಿ ಈ ಭಾಗದ ರೈತರ ಭೂಮಿಯಲ್ಲಿ ಅಂತರ್ಜಲ ಚೇತರಿಕೆ ಕಂಡಿದೆ. ನಮ್ಮ ತಂದೆಯವರ ಕನಸಿನಂತೆ ಗಂಗಾಧರೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಆಗಬೇಕು. ಶಾಸಕರ ಜತೆ ದೇವಾಲಯದ ಜೀರ್ಣೋದ್ಧಾರಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ಸರಸ್ವತಮ್ಮ ಭೈರಪ್ಪ, ಗ್ರಾಮ ಪಂಚಾಯಿತಿ ಮಾಜಿ ಪ್ರಧಾನ ಪಿ.ವೀರೇಶ್, ಉದ್ಯಮಿ ಭುವನಹಳ್ಳಿ ಯೋಗೇಶ್, ಮುಖಂಡರಾದ ದೊರೆ ಸ್ವಾಮಿ, ಬೆಳಗಿಹಳ್ಳಿ ಪುಟ್ಟಸ್ವಾಮಿ, ಕುಂಬಾರಳ್ಳಿ ರಮೇಶ್, ಪುರುಷೋತ್ತಮ್, ಎಸ್. ಜಿ.ಚಿರಂಜೀವಿ, ಅನಂತಯ್ಯ, ವೇಣು, ಪ್ರಶಾಂತ್ ಬಾಬು, ಕೆಂಪೇಗೌಡ, ಜಯ ಲಿಂಗೇಗೌಡ, ಎಸ್.ಎಸ್.ಗಂಗೆಗೌಡ, ಜವಳಿ ರಾಜು, ಎನ್.ಬಿ.ನಾಗರಾಜ್, ಎಸ್.ಬಿ.ವೀರೇಶ್, ಧನಂಜಯ, ರವೀಶ್, ಶಿವ ಪ್ರಸಾದ್, ಅಮೃತ್ ಮಹಲ್ ಸಿದ್ದಲಿಂಗಪ್ಪ, ನಾಗೇಶ್, ಸಿದ್ದಲಿಂಗೇಗೌಡ, ದರ್ಶನ್, ನಂಜುಂಡ ಶೆಟ್ಟಿ, ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net