ಒಳ್ಳೆಯ ಕೆಲಸ ಫಲ ನೀಡುವುದು ಖಚಿತ

ಹಾಸನ ನಗರದ ತವರು ಚಾರಿಟಬಲ್ ಟ್ರಸ್ಟ್‌ನ ಅಶ್ರಯದಲ್ಲಿ ಹಮ್ಮಿಕೊಂಡಿದ್ದ ‘ತವರಿನ ಆಸರೆ’ ಉಚಿತ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರವಿಕುಮಾರ್ ಬಲ್ಲೇನಹಳ್ಳಿ, ಎಚ್.ಕೆ. ಪಾಲಾಕ್ಷ, ಜಿ.ಎನ್.ಅನುಸೂಯಾ, ರಂಗಸ್ವಾಮಿ, ಆರ್.ಕೆ. ಮಧುಪ್ರಿಯಾ ಇತರರಿದ್ದರು.
ಹಾಸನ ನಗರದ ತವರು ಚಾರಿಟಬಲ್ ಟ್ರಸ್ಟ್‌ನ ಅಶ್ರಯದಲ್ಲಿ ಹಮ್ಮಿಕೊಂಡಿದ್ದ ‘ತವರಿನ ಆಸರೆ’ ಉಚಿತ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರವಿಕುಮಾರ್ ಬಲ್ಲೇನಹಳ್ಳಿ, ಎಚ್.ಕೆ. ಪಾಲಾಕ್ಷ, ಜಿ.ಎನ್.ಅನುಸೂಯಾ, ರಂಗಸ್ವಾಮಿ, ಆರ್.ಕೆ. ಮಧುಪ್ರಿಯಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಒಳ್ಳೆಯ ಕೆಲಸ ಫಲ ನೀಡುವುದು ಖಚಿತ
  • ಜಿಲ್ಲಾ ಏಡ್ಸ್ ನಿಯಂತ್ರಣ ಸೊಸೈಟಿಯ ರವಿಕುಮಾರ್ ಬಲ್ಲೇನಹಳ್ಳಿ ಅಭಿಮತ
ಹಾಸನ: ಒಳ್ಳೆಯ ಕೆಲಸ ಮಾಡುವುದು ಎಂದರೆ ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡಿದಂತೆಯೇ. ಇವತ್ತು ಉಪಯೋಗಕ್ಕೆ ಬಾರದಿದ್ದರೂ, ಮುಂದೊಂದು ದಿನ ಅದರ ಫಲ ಖಂಡಿತವಾಗಿ ಸಿಗುತ್ತದೆ ಎಂದು ಜಿಲ್ಲಾ ಏಡ್ಸ್ ನಿವಾರಣಾ ಸೊಸೈಟಿಯ ರವಿಕುಮಾರ್ ಬಲ್ಲೇನಹಳ್ಳಿ ಹೇಳಿದರು.
ನಗರದ ತವರು ಚಾರಿಟಬಲ್ ಟ್ರಸ್ಟ್‌ನ ಅಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ತವರಿನ ಆಸರೆ’ ಉಚಿತ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳನ್ನು ಬ್ರಾಂಡ್ ಮಾಡಿಕೊಂಡು ಪ್ರಚಾರ ಮಾಡುವವರ ಸಂಖ್ಯೆ ಹೆಚ್ಚಿದೆ. ಆದರೆ, ತವರು ಚಾರಿಟಬಲ್ ಟ್ರಸ್ಟ್ ಯಾವುದೇ ಪ್ರಚಾರದ ಗದ್ದಲವಿಲ್ಲದೆ ಮೌನ ಸೇವೆಯ ಮೂಲಕ ಎಲೆಮರೆ ಕಾಯಿಯಂತೆ ಸಮಾಜಸೇವೆಯಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು.
ಜೀವನದಲ್ಲಿ ಆತ್ಮತೃಪ್ತಿ ನೀಡುವಂತಹ ಸೇವಾಕಾರ್ಯಗಳನ್ನು ಮಾಡಬೇಕು. ಯಾವುದೇ ಸರ್ಕಾರಿ ಅನುದಾನ ಅಥವಾ ದೇಣಿಗೆಗಳನ್ನು ಪಡೆಯದೆ, ಸ್ವಂತ ದುಡಿಮೆಯ ಹಣದಿಂದ ಸಮಾಜಸೇವೆಯಲ್ಲಿ ತೊಡಗಿರುವ ಡಾ.ಎಚ್.ಕೆ.ಪಾಲಾಕ್ಷ ಹಾಗೂ ಅವರ ಪತ್ನಿಯ ಸೇವೆ ಶ್ಲಾಘನೀಯ. ನಿಮ್ಮ ಸೇವಾ ಕೆಲಸ ಇವತ್ತು ಉಪಯೋಗಕ್ಕೆ ಬಾರದಿದ್ದರೂ ಮುಂದೊಂದು ದಿನ ಬಂದೇ ಬರುತ್ತದೆ. ನಾವು ಇಂದು ಆರೋಗ್ಯವಾಗಿ ಹಾಗೂ ಸಂತೋಷದಿಂದ ಬದುಕುತ್ತಿದ್ದೇವೆ ಎಂದರೆ, ಅದಕ್ಕೆ ನಮ್ಮ ಪಾಲಕರು ಮಾಡಿದ ಒಳ್ಳೆಯ ಕೆಲಸಗಳ ಆಶೀರ್ವಾದವೇ ಕಾರಣ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಜಿ.ಎನ್.ಅನುಸೂಯಾ, ಜೀವನ ಆಶ್ರಯ ಸಂಸ್ಥೆಯ ಅಧ್ಯಕ್ಷ ರಂಗಸ್ವಾಮಿ, ಡಾ. ಎಚ್.ಕೆ.ಪಾಲಾಕ್ಷ, ಆರ್.ಕೆ.ಮಧುಪ್ರಿಯಾ, ತವರು ಚಾರಿಟಬಲ್ ಟ್ರಸ್ಟ್‌ನ ಸಿಬ್ಬಂದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net