ರಾಷ್ಟ್ರಮಟ್ಟದ ಸಾಮಾನ್ಯ ಜ್ಞಾನ ಒಲಿಂಪಿಯಾಡ್‌ನಲ್ಲಿ ಆರನೇ ತರಗತಿಯ ಎಸ್.ಎನ್.ನಮ್ರುತ್ ಮತ್ತು ಮೂರನೇ ತರಗತಿಯ ಈತನ್ ವಿಮನ್ ಚಿನ್ನದ ಪದಕ ಪಡೆದಿದ್ದಾರೆ. ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆಯಲ್ಲಿ 5ನೇ ತರಗತಿಯ ಪ್ರಿಯಾಂಕಾ, 7ನೇ ತರಗತಿಯ ಎಚ್.ಕೆ.ಹನ್ಸಿಕಾ, ಆರನೇ ತರಗತಿಯ ಹರ್ಷಿನ್ ಫಾತಿಮಾ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ. ರಾಷ್ಟ್ರಮಟ್ಟದ ಗಣಿತ ಒಲಿಂಪಿಯಾಡ್‌ನಲ್ಲಿ 5ನೇ ತರಗತಿಯ ಕೆ.ಐ. ಇಸ್ಮಾ, ಎಂ.ಚಿರಂತ್, ಪಿ.ಯಶಸ್ ಗೌಡ ಚಿನ್ನದ ಪದಕ ಪಡೆದಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರಾದ ಎಸ್.ಜೆ.ಫಾದರ್ ಲ್ಯಾನ್ಸಿ ಫೆನಾರ್ಂಡಿಸ್ ಅಭಿನಂದಿಸಿದರು.