ಶಾಲಾ, ಕಾಲೇಜು ಮಕ್ಕಳಿಗೆ ಟ್ರಾಫಿಕ್ ಸಿಗ್ನಲ್ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳು ಕ್ರಮವಹಿಸಬೇಕು. ಅಧಿಕಾರಿಗಳು, ಸಿಬ್ಬಂದಿ ಹಾಗೂ ಚಾಲಕರಿಗೆ ಟ್ರಾಫಿಕ್ ಸಿಗ್ನಲ್ ಹಾಗೂ ರಸ್ತೆ ಸುರಕ್ಷತೆ ಕುರಿತು ಒಂದು ಪರೀಕ್ಷೆ ನಡೆಸಲಾಗುವುದು, ವಿಜೇತರಾದವರಿಗೆ ಜ.26 ರಂದು ಬಹುಮಾನ ನೀಡಲಾಗುವುದು. ಈ ವರ್ಷದಲ್ಲಿ ಇದುವರೆಗೆ 2499 ಅಪಘಾತಗಳು ಸಂಭವಿಸಿದ್ದು, 426 ಜನರು ಸಾವನ್ನಪ್ಪಿದ್ದಾರೆ. ಜನರ ಜೀವ ರಕ್ಷಣೆ ಹಾಗೂ ಸುರಕ್ಷತೆಗಾಗಿ ಹೆಚ್ಚಿನ ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.