ಒಂದು ವಾಹನಕ್ಕೆ 200 ಲೀಟರ್ ಡೀಸೆಲ್ ಮತ್ತು 50 ಲೀ. ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ. ಮೊದಲು ಎಷ್ಟು ಬೇಕಾದರೂ ಕೊಡುತ್ತಿದ್ದರು. ಆದರೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾರೆಂಬ ಕಾರಣಕ್ಕೆ ಮಿತಿ ನಿಗದಿಗೊಳಿಸಲಾಗಿದೆ. ಈ ಹಿಂದೆ ಆಯಿಲ್ ಕಂಪನಿಯವರು ಸಾಲದ ರೂಪದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜು ಮಾಡುತ್ತಿದ್ದರು. ಪ್ರಸ್ತುತ ಆ ವ್ಯವಸ್ಥೆಗೆ ಕಡಿವಾಣ ಹಾಕಲಾಗಿದೆ. ಜಿಲ್ಲೆಯಲ್ಲಿ ಒಟ್ಟು 226 ಪೆಟ್ರೋಲ್ ಬಂಕ್‌ಗಳಿದ್ದು, ನಿತ್ಯ ಅಂದಾಜು 2 ಲಕ್ಷ ಲೀಟರ್ ಇಂಧನ ಮಾರಾಟ ವಾಗುತ್ತದೆ ಎನ್ನಲಾಗಿದೆ. ಬಿಪಿಸಿಎಲ್ 39, ಹೆಚ್‌ಪಿಸಿಎಲ್ 67, ಎಲ್‌ಒಸಿಎಲ್ 79, ಎಂಆರ್‌ಪಿಎಲ್ 4, ನಯಾರಾ 33 ಹಾಗು ರಿಲಯನ್ಸ್ ಕಂಪನಿಯ 4 ಬಂಕ್‌ಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.