ಶರಣರ ವಚನಗಳಲ್ಲಿನ ಆದರ್ಶಗಳನ್ನು ಅನುಸರಿಸಿ

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮಂಜಯ್ಯ, ತಾರಾನಾಥ್, ಗ್ಯಾರಂಟಿ ರಾಮಣ್ಣ, ಚೇತನ್ ಇತರರಿದ್ದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮಂಜಯ್ಯ, ತಾರಾನಾಥ್, ಗ್ಯಾರಂಟಿ ರಾಮಣ್ಣ, ಚೇತನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶರಣರ ವಚನಗಳಲ್ಲಿನ ಆದರ್ಶಗಳನ್ನು ಅನುಸರಿಸಿ
  • ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಂಜಯ್ಯ ಸಲಹೆ
  • ಕಾಯಕ ಶರಣರ ಜಯಂತಿ
ಹಾಸನ: ಕಾಯಕದಿಂದ ಮಾತ್ರ ಮುಕ್ತಿ ಸಾಧ್ಯವೆಂದು ಕಾಯಕ ಶರಣರು ವಚನಗಳ ಮೂಲಕ 12ನೇ ಶತಮಾನದಲ್ಲಿ ಸಾರಿದ್ದಾರೆ. ಹಾಗಾಗಿ ಪ್ರತಿಯೊಬ್ಬರು ವಚನಗಳ ಮಹತ್ವವನ್ನು ಅರಿಯಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಂಜಯ್ಯ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನ ಅನುಭವ ಮಂಟಪದಲ್ಲಿ ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಸಮಗಾರ ಹರಳಯ್ಯ ಇನ್ನೂ ಹಲವಾರು ಶರಣು ಅನುಯಾಯಿಗಳಾಗಿದ್ದರು. ತಮ್ಮ ಕಾಯಕವೇ ಶ್ರೇಷ್ಠ ಎಂಬುದನ್ನು ವಚನಗಳ ಮೂಲಕ ತಿಳಿಸುವ ಕೆಲಸ ಮಾಡಿದ್ದಾರೆ ಎಂದರು.
12ನೇ ಶತಮಾನದ ಜ್ಞಾನ ದಾಸೋಹವನ್ನು ಪ್ರಾರಂಭವಾಯಿತು. ಶರಣರ ವಚನಗಳ ಆದರ್ಶವನ್ನು ಯುವ ಪೀಳಿಗೆ ಪಾಲಿಸಿಬೇಕು, ಕಾಯಕ ಕನಿಷ್ಠವಲ್ಲ. ನಾವು ಮಾಡುವ ಕೆಲಸದಿಂದ ಮಹತ್ವ ತಿಳಿಯುತ್ತದೆ. ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಯು ಹುಟ್ಟಿದಾಗ ವಿಶ್ವ ಮಾನವರಾಗಿ ಜನಿಸಿಸುತ್ತಾರೆ ಎಂದರು.
ಸಮಾಜದಲ್ಲಿ ಜಾತಿ, ಧರ್ಮ ತಾರತಮ್ಯ, ಮೇಲು-ಕೀಳು ತಾರತಮ್ಯ ನಡುವೆಯೂ ಸಮಾನತೆಯನ್ನು 12ನೇ ಶತಮಾನದಲ್ಲಿ ಕಾಣಬಹುದಾಗಿದೆ. ಶರಣರು ತಮ್ಮ ಕಾಯಕವನ್ನು ಮಾಡುವ ಸಂದರ್ಭದಲ್ಲಿ ನೀವು ಮಾಡುವ ಕಾಯಕವೇ ಶ್ರೇಷ್ಠ ವಿನಾ ಜಾತಿ ಅಲ್ಲ ಎಂದು ಹೇಳುವ ಮೂಲಕ ಅನುಭವ ಮಂಟಪವನ್ನು ಕಟ್ಟಲಾಗಿದೆ ಎಂದು ತಿಳಿಸಿದರು.
ಹುಟ್ಟಿಗೆ ಯಾವುದೇ ಜಾತಿ ಇರುವುದಿಲ್ಲ. ಸಮಾಜದಲ್ಲಿ ಯಾವುದೇ ವೃತ್ತಿಯಲ್ಲಿ ಮೇಲು, ಕೀಳು ಎಂಬುದು ಇರಬಾರದು ಎಲ್ಲ ವೃತ್ತಿಯನ್ನು ಗೌರವಿಸಬೇಕು. ಕಾಯಕ ಶರಣರ ವಚನಗಳಲ್ಲಿನ ಮಹತ್ವ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ತಾರಾನಾಥ್, ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ, ಚೇತನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net