ಜನಪದವನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಿದೆ

ಹಾಸನ ತಾಲೂಕಿನ ದೊಡ್ಡ ಬೀಕನಹಳ್ಳಿ ಆಂಜನೇಯ ಸ್ವಾಮಿ ದೇಗುಲ ಆವರಣದಲ್ಲಿ ಹಮ್ಮಿಕೊಂಡಿದ್ದ ಜನಪದ ಸಂಭ್ರಮ ಮತ್ತು ವಿಚಾರಸಂಕಿರಣ ಕಾರ್ಯಕ್ರಮಕ್ಕೆ ಹಿರಿಯ ರಂಗಕರ್ಮಿ ನಾಗರಾಜ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಸಣ್ಣಚಾರಿ, ಶಿವಣ್ಣ, ನೀಲಮ್ಮ ಇತರರಿದ್ದರು.
ಹಾಸನ ತಾಲೂಕಿನ ದೊಡ್ಡ ಬೀಕನಹಳ್ಳಿ ಆಂಜನೇಯ ಸ್ವಾಮಿ ದೇಗುಲ ಆವರಣದಲ್ಲಿ ಹಮ್ಮಿಕೊಂಡಿದ್ದ ಜನಪದ ಸಂಭ್ರಮ ಮತ್ತು ವಿಚಾರಸಂಕಿರಣ ಕಾರ್ಯಕ್ರಮಕ್ಕೆ ಹಿರಿಯ ರಂಗಕರ್ಮಿ ನಾಗರಾಜ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಸಣ್ಣಚಾರಿ, ಶಿವಣ್ಣ, ನೀಲಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜನಪದವನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಿದೆ
  • ಹಿರಿಯ ರಂಗಕರ್ಮಿ ನಾಗರಾಜ ಅಭಿಪ್ರಾಯ
  • ದೊಡ್ಡಬೀಕನಹಳ್ಳಿಯಲ್ಲಿ ವಿಚಾರಸಂಕಿರಣಕ್ಕೆ ಚಾಲನೆ
ಹಾಸನ: ಜನಪದ ಎಂಬುದು ನಮ್ಮ ಪೂರ್ವಜರು ನಮಗೆ ನೀಡಿದ ಬಹುದೊಡ್ಡ ಕೊಡುಗೆ. ಅದನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಹಿರಿಯ ರಂಗಕರ್ಮಿ ನಾಗರಾಜ ಹೇಳಿದರು.
ಹಾಸನ ತಾಲೂಕಿನ ದೊಡ್ಡ ಬೀಕನಹಳ್ಳಿ ಆಂಜನೇಯಸ್ವಾಮಿ ದೇಗುಲ ಆವರಣದಲ್ಲಿ ವಾಲ್ಮೀಕಿ ಮಹಿಳಾ ಸಾಂಸ್ಕೃತಿಕ ಕಲಾ ಸಂಸ್ಥೆ ಜಾಗರವಳ್ಳಿ, ಕರ್ನಾಟಕ ಜನಪದ ಪರಿಷತ್ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ ಸಹಕಾರದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಜನಪದ ಸಂಭ್ರಮ ಮತ್ತು ವಿಚಾರಸಂಕಿರಣ ಕಾರ್ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜನಪದದಲ್ಲಿ ಹೆಣ್ಣಿಗೆ ಹೆಚ್ಚಿನ ಪ್ರಾಶಸ್ತ್ಯ ಇದೆ. ಎಲ್ಲದಕ್ಕೂ ಹೆಣ್ಣೇ ಮೊದಲು ಎಂಬುದನ್ನು ನಮ್ಮ ಪುರಾಣದಲ್ಲಿ ಕಾಣಬಹುದು. ಹಾಗೆ ಇಂಥ ಪ್ರಮುಖ ಕಲೆಗಳನ್ನು ಕೋಲಾಟ, ಸೋಬಾನೆ ಪದ, ಬೀಸೋ ಕಲ್ಲಿನ ಪದ, ಸುಗ್ಗಿ ಕುಣಿತ, ಸೋಮನ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಭಜನೆ ಗೀಗಿ ಪದ, ಕರಪಾಲು ಮೇಳ, ವೀರಗಾಸೆ ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯ ಇದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಣ್ಣಚಾರಿ ಮಾತನಾಡಿ, ಯುವ ಪೀಳಿಗೆಗೆ ಪರಿಚಯವೇ ಇಲ್ಲದ ಅನೇಕ ಕಲೆಗಳು ಹಾಗೂ ಕಲಾವಿದರನ್ನು ಗುರುತಿಸಿ ವೇದಿಕೆ ನೀಡುವುದರ ಜತೆಗೆ ಅವರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಕೆಲಸವನ್ನು ಸಂಘಟನೆಯವರು ಮಾಡಿದ್ದಾರೆ ಎಂದರು.
ಆಧುನಿಕತೆಯ ಹೆಸರಲ್ಲಿ ಪ್ರಾಚೀನ ಪಾಶ್ಚಿಮಾತ್ಯ ಪರಂಪರೆಯನ್ನು ಅನುಸರಿಸುತ್ತ ಬಂದಿರುವ ನಮಗೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಜನಪದದ ಮಹತ್ವವನ್ನು ಅರಿತು ಅದನ್ನು ಉಳಿಸಿ ಬೆಳೆಸುವಂತಹ ಕಾರ್ಯಯೋನ್ಮುಖರಾಗ ಬೇಕಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಶಿವಣ್ಣ ಮಾತನಾಡಿ, ಜನಸಾಮಾನ್ಯರು ತಮ್ಮ ಮನದ ನೋವು-ನಲಿವುಗಳನ್ನು ವ್ಯಕ್ತಪಡಿಸಲು ಕಂಡುಕೊಂಡು ದಾರಿಯೇ ಜನಪದ ಉತ್ತರ ಕರ್ನಾಟಕದಲ್ಲಿ ಜನಪದ ಬಹಳ ಉತ್ತುಂಗದಲ್ಲಿದೆ. ದೇವರ ಚರಿತ್ರೆಗಳು ಜನಪದವನ್ನೇ ಅವಲಂಬಿಸಿದೆ ಎಂದರು.
ಸರ್ಕಾರ ಒಂಬತ್ತನೇ ತರಗತಿಯಲ್ಲಿ ಜನಪದ ಕುರಿತು ಪಠ್ಯ ನೀಡಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಿರುವುದು ಸ್ವಾಗತಾರ್ಹ ಎಂದರು. ಪೂಜಾ ಕುಣಿತ, ಡೊಳ್ಳು ಕುಣಿತ, ಕೋಲಾಟ, ಸೋಮನ ಕುಣಿತ, ಕಂಸಳೆ ಮೆರವಣಿಗೆ ಮತ್ತು ವೇದಿಕೆಯಲ್ಲಿ ಪ್ರದರ್ಶನ ನೀಡಿಲಾಯಿತು. ಕಾರ್ಯಕ್ರಮವನ್ನು ವಾಲ್ಮೀಕಿ ಮಹಿಳಾ ಸಂಘದ ಅಧ್ಯಕ್ಷರಾದ ನೀಲಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net