ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ತಾಲೂಕಿನ ಮಲ್ಲದೇವರಪುರ ಬೆಟ್ಟದಲ್ಲಿ ಸ್ವಾಧ್ಯಾಯ ಕಾರ್ಯಕ್ರಮ ಹಮಿಕೊಳ್ಳಲಾಗಿತ್ತು. ಅ.ಭಾ.ಸಾ.ಪ. ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ, ಸುನಿತಾ ದೇವಿ ಪ್ರಸಾದ್, ನಾಗೇಂದ್ರ ಕಟ್ಟೆಮನೆ, ಜಯಣ್ಣ ವಂದಿಸಿದರು. ನೇ.ರಾ.ಪ್ರಶಾಂತ್ ಇತರರಿದ್ದರು.
ಹಾಸನ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ತಾಲೂಕಿನ ಮಲ್ಲದೇವರಪುರ ಬೆಟ್ಟದ ಮಲ್ಲೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಸ್ವಾಧ್ಯಾಯ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬೆಳಗೆರೆ ಕೃಷ್ಣಶಾಸ್ತ್ರಿ ಅವರು ರಚಿಸಿರುವ ಯೇಗ್ದಾಗೆಲ್ಲಾ ಐತೆ ಪುಸ್ತಕದ ಮಂಥನ ನಡೆಯಿತು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಸದಸ್ಯರು ಕೃತಿ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅ.ಭಾ.ಸಾ.ಪ. ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಅವರು, ಸಾಹಿತ್ಯದಲ್ಲಿ ಭಾರತೀಯತೆಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಅ. 27, 1966ರಂದು ಪರಿಷದ್ ಅಸ್ತಿತ್ವಕ್ಕೆ ಬಂದಿತು. ಹಾಸನದಲ್ಲಿ 2015ರಿಂದ ಸಾಹಿತ್ಯದ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲರಲ್ಲೂ ಪುಸ್ತಕ ಓದುವ ಅಭಿರುಚಿ ಬೆಳೆಸಬೇಕು. ಆ ಮೂಲಕ ಸಾಹಿತ್ಯವನ್ನು ಎಲ್ಲರಿಗೂ ತಲುಪಿಸಬೇಕೆಂಬ ಉದ್ದೇಶದಿಂದ ಸ್ವಾಧ್ಯಾಯ ಪರಿಕಲ್ಪನೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸ್ವಾಧ್ಯಾಯ ಪ್ರಮುಖ್ ಸುನಿತಾ ದೇವಿ ಪ್ರಸಾದ್ ಮಾತನಾಡಿ, ಯೇಗ್ದಾಗೆಲ್ಲಾ ಐತೆ ಪುಸ್ತಕವು ಸರಳ ಹಾಗೂ ಅರ್ಥಪೂರ್ಣ ಕೃತಿಯಾಗಿದೆ. ಮುಕುಂದೂರು ಸ್ವಾಮೀಜಿ ಅವರು ನೆಲೆಸಿದ್ದ ಈ ಬೆಟ್ಟದಲ್ಲಿಯೇ ಕಾರ್ಯಕ್ರಮ ಹಮ್ಮಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶೃಂಗೇರಿ ವಿಭಾಗ ಸಹ ಸಂಯೋಜಕ ನಾಗೇಂದ್ರ ಕಟ್ಟೆಮನೆ, ಜಿಲ್ಲಾ ಖಜಾಂಚಿ ಜಯಣ್ಣ ವಂದಿಸಿದರು. ಕಾರ್ಯದರ್ಶಿ ನೇ.ರಾ.ಪ್ರಶಾಂತ್, ಸದಸ್ಯರಾದ ಯೋಗೇಶ್, ನಿರಂಜನ, ನಾಗರಾಜು, ತೋಂಟದಾರ್ಯ, ಲಕ್ಷ್ಮೀ ಇತರರಿದ್ದರು.