ರಾಜಸ್ವ ಆದಾಯದ ನಿರೀಕ್ಷೆ: ಒಟ್ಟು 150.25 ಕೋಟಿ ರೂ. ರಾಜಸ್ವ ಆದಾಯ ನಿರೀಕ್ಷಿಸಲಾಗಿದೆ. ಇದರಲ್ಲಿ ಆಸ್ತಿ ತೆರಿಗೆ 42 ಕೋಟಿ ರೂ., ಖಾತಾ ಪ್ರತಿಗಳ ಶುಲ್ಕ 10 ಲಕ್ಷ ರೂ., ಖಾತಾ ಬದಲಾವಣೆ ಶುಲ್ಕ 2 ಕೋಟಿ ರೂ., ಆಸ್ತಿ ತೆರಿಗೆ ದಂಡ-ಜುಲ್ಮಾನೆ 5 ಕೋಟಿ ರೂ., ಅನಕೃತ ಆಸ್ತಿಗಳ ಮೇಲಿನ ದಂಡ 6.80 ಕೋಟಿ ರೂ. ಸೇರಿದಂತೆ ಕಂದಾಯ ಶಾಖೆಯಿಂದ 56.99 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ನಿತೇಶ್ ಪಟೇಲ್ ಹೇಳಿದರು.