ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಿರಲಿ

ಹಾಸನ ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಹಾಸನ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಸಂಬಂಧ ವಿಶೇಷ ಸಭೆ ನಡೆಯಿತು. ಎಸ್‌ಐಆರ್ ಪ್ರಕ್ರಿಯೆ ಬಿಜೆಪಿ ರಾಜ್ಯ ಸಂಚಾಲಕ ದತ್ತಾತ್ರೇಯ, ಪ್ರೀತಂ ಗೌಡ, ಸಿದ್ದೇಶ್ ನಾಗೇಂದ್ರ, ಅಶ್ವಿನಿ ಶಂಕರ್ ಇತರರಿದ್ದರು.
ಹಾಸನ ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಹಾಸನ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಸಂಬಂಧ ವಿಶೇಷ ಸಭೆ ನಡೆಯಿತು. ಎಸ್‌ಐಆರ್ ಪ್ರಕ್ರಿಯೆ ಬಿಜೆಪಿ ರಾಜ್ಯ ಸಂಚಾಲಕ ದತ್ತಾತ್ರೇಯ, ಪ್ರೀತಂ ಗೌಡ, ಸಿದ್ದೇಶ್ ನಾಗೇಂದ್ರ, ಅಶ್ವಿನಿ ಶಂಕರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಿರಲಿ
  • ಬಿಜೆಪಿ ರಾಜ್ಯ ಸಂಚಾಲಕ ದತ್ತಾತ್ರೇಯ ಕಿವಿಮಾತು
  • ಹಾಸನದಲ್ಲಿ ಕಾರ್ಯಕರ್ತರೊಂದಿಗೆ ಸಭೆ
ಹಾಸನ: ಮತದಾರರ ವಿಶೇಷ ಸಮಗ್ರ ಪಟ್ಟಿ ಪರಿಷ್ಕರಣೆ ವೇಳೆ ಯಾವುದೇ ಅನುಮಾನ ಬಂದರೂ, ಕೂಡಲೇ ಎಚ್ಚೆತ್ತು ಪರಿಶೀಲನೆ ನಡೆಸಬೇಕು. ನಿಜವಾದ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂದು ಎಸ್‌ಐಆರ್ ಪ್ರಕ್ರಿಯೆ ಬಿಜೆಪಿ ರಾಜ್ಯ ಸಂಚಾಲಕ ದತ್ತಾತ್ರೇಯ ಹೇಳಿದರು.
ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಸಭೆಯಲ್ಲಿ ಮಾತನಾಡಿದರು.
ಮನೆ ಮನೆ ಭೇಟಿ ಜೂನ್ 30 ರಿಂದ ಜು.29ರವರೆಗೆ ನಡೆಯಲಿದ್ದು, ಮತ ಗಟ್ಟೆ ಬಿಎಲ್‌ಒಗಳು ಎಲ್ಲರ ಮನೆಗೆ ಭೇಟಿ, 2002 ಮತ್ತು 2025ರ ಮತದಾರರ ಪಟ್ಟಿ ಮ್ಯಾಪಿಂಗ್ ಮಾಡುವರು. ಮೊದಲು ಎನುಮರೇಷನ್ ಅರ್ಜಿ ಕೊಡಲಿದ್ದಾರೆ. ಅದನ್ನು ಸರಿಯಾಗಿ ಭರ್ತಿ ಮಾಡಬೇಕು. ಇನ್ಮುಂದೆ ಹಳೇ ವೋಟರ್ ಇಲ್ಲವಾಗಲಿದ್ದು, ಹೊಸದು ಬರಲಿದೆ ಎಂದರು.
2002ರ ಪಟ್ಟಿಯಲ್ಲಿ ಇಲ್ಲದವರು ಹತ್ತಿರದ ಸಂಬಂಧಿಕರ ಜಾಮೀನು ಅಥವಾ ಅವರ ಎಪಿಕ್ ಕಾರ್ಡ್ ಕೊಡುವುದು ಕಡ್ಡಾಯ. ಕಡೆಯಲ್ಲಿ ನಾನು ಈ ದೇಶದ ನಾಗರಿಕ, ಸತ್ಯವಾದ ಮಾಹಿತಿ ನೀಡಿದ್ದೇನೆ ಎಂದು ಸಹಿ ಮಾಡಬೇಕು, ಸುಳ್ಳು ಮಾಹಿತಿ ನೀಡಿದರೆ 1 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮತಗಟ್ಟೆ ಬಿಎಲ್‌ಒ ಯಾರು ಎಂದು ಮೊದಲು ತಿಳಿಯಬೇಕು. ಒಟ್ಟು ಮೂರು ಬಾರಿ ಭೇಟಿ ನೀಡುವರು, ಮೊದಲಿಗೆ ಎನುಮರೇಷನ್ ಅರ್ಜಿ ಕೊಟ್ಟು ಹೋಗುತ್ತಾರೆ. ಆ ವೇಳೆ ಮತದಾರರಿಗೆ ಎಲ್ಲ ರೀತಿಯಲ್ಲೂ ಅನುಕೂಲ ಆಗುವ ರೀತಿಯಲ್ಲಿ ನೀವು ತಲಾ ಐದು ಜನರ ತಂಡ ಕಟ್ಟಿಕೊಂಡು, ಬಿಎಲ್‌ಒ ಬಂದಾಗ ಅವರ ಜತೆಗಿದ್ದು ಕ್ರಿಯಾಶೀಲವಾಗಿ ಕೆಲಸ ಮಾಡಿ ಎಂದು ತಿಳಿ ಹೇಳಿದರು.
ಎಸ್‌ಐಆರ್ ಪ್ರಕ್ರಿಯೆಗೆ ಹೆಚ್ಚು-ಹೆಚ್ಚು ಯುವಕರನ್ನು ಬಳಸಿಕೊಳ್ಳಿ, ಅನುಮಾನ ಬಂದ ಕಡೆ ಎಲ್ಲ ರೀತಿಯಲ್ಲೂ ಪರಿಶೀಲನೆ ಮಾಡಿ, ಕೂಡಲೇ ತಪ್ಪು ಸರಿಪಡಿಸುವ ಕೆಲಸ ಮಾಡಿ, ಶಂಕೆ ಇದ್ದವರಿಗೆ ಆಯೋಗವೇ ನೋಟಿಸ್ ಕೊಡುವ ಕೆಲಸ ಮಾಡಲಿದೆ ಎಂದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ, ಎಸ್‌ಐಆರ್ ಪ್ರಕ್ರಿಯೆಗಾಗಿ ನಿಯೋಜನೆಗೊಂಡ ನಮ್ಮ ಪಕ್ಷದ ಎಲ್ಲರೂ ಒಂದು ತಂಡವಾಗಿ ಮತದಾರರ ಮನೆ ಬಳಿಗೆ ಹೋಗಬೇಕು. ಅವರ ಸಮಸ್ಯೆ ಏನೆಂದು ಆಲಿಸಬೇಕು. ಸತ್ಯಾಸತ್ಯತೆ ಪರಿಶೀಲಿಸಿ ಎಂದು ಹೇಳಿದರು.
ಕೆಲವರದ್ದು ಹಾಸನ ಮತ್ತು ಬೆಂಗಳೂರು ಎರಡೂ ಕಡೆಯಲ್ಲಿ ಮತ ಇರುತ್ತದೆ. ನಮಗೆ ಅನುಕೂಲವಾಗುವ ರೀತಿಯಲ್ಲಿ ಹಾಸನದಲ್ಲೇ ಮತ ಉಳಿಸಿಕೊಳ್ಳಲು ಸಂಬಂಧಪಟ್ಟವರ ಮನವೊಲಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ನಾಳೆಯಿಂದ ಯುದ್ಧ ಆರಂಭ ಆಗಲಿದೆ, ಮಂಡಲ ಅಧ್ಯಕ್ಷರು ನಿಮ್ಮ ಬೂತ್‌ನ ಬಿಎಲ್‌ಒ, ಅಧಿಕಾರಿಗಳು ಎಷ್ಟು ಜಾಗೃತರಾಗಿ ಕೆಲಸ ಮಾಡಿದ್ದಾರೆ ಎಂಬುದು ಮುಖ್ಯ. ಆ ಬಗ್ಗೆ ನೀವು ಗಮನ ಹರಿಸಬೇಕು. ನೀವೇ ಸಂಪರ್ಕ ಮಾಡಿ ನಮ್ಮ ಪರವಾದ ಮತದಾರರ ಸಂಖ್ಯೆ ಹೆಚ್ಚಿಸಿ. ಅಂತಿಮ ಮತದಾರರ ಪಟ್ಟಿ ಪ್ರಕಟ ಆಗೋವರೆಗೂ ನಿಗಾ ವಹಿಸಿ. ದಿನಕ್ಕೆ 2 ಗಂಟೆ ಕೆಲಸ ಮಾಡಿ, ಚುನಾವಣೆಯ ಮೊದಲ ಅಡಿಪಾಯವೇ ಇದು ಎಂದು ಹೇಳಿದರು.
ಸಭೆಯಲ್ಲಿ ಮೈಸೂರು ವಿಭಾಗದ ಎಸ್‌ಐಆರ್ ಉಸ್ತುವಾರಿ ಅಶ್ವಿನಿ ಶಂಕರ್, ಮುಖಂಡರಾದ ನವಿಲೆ ಅಣ್ಣಪ್ಪ, ಜಿಲ್ಲಾ ವಕ್ತಾರ ಆರ್.ಮೋಹನ್, ನಗರಾಧ್ಯಕ್ಷ ಯೋಗೀಶ್ ಗೌಡ, ಲಲಾಟಮೂರ್ತಿ, ಬೂದೇಶ್, ರಾಜೇಶ್, ಲಕ್ಷ್ಮೀಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net