ಮಾನವೀಯ ಮೌಲ್ಯ ಕಲಿಸಿದರೆ ಪರಿಪೂರ್ಣವಾಗಲಿದೆ ಶಿಕ್ಷಣ

ನಗರದ ಎಸ್‌ಆರ್‌ಎಸ್ ಪ್ರಜ್ಞಾ ವಿದ್ಯಾಶಾಲೆ ಶಾಲಾ ವಾರ್ಷಿಕೋತ್ಸವ ಎಸ್‌ಆರ್‌ಎಸ್ ಪ್ರಜ್ಞೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಟಿ.ಎಚ್.ಅಪ್ಪಾಜಿಗೌಡ, ಡಾ.ಎಚ್.ಎಲ್.ಮಲ್ಲೇಶ್‌ಗೌಡ,  ಕೆ.ಎನ್ ಬಲರಾಮ್,  ಕೆ. ರಂಗನಾಥ್ ಇತರರು ಇದ್ದರು.
ನಗರದ ಎಸ್‌ಆರ್‌ಎಸ್ ಪ್ರಜ್ಞಾ ವಿದ್ಯಾಶಾಲೆ ಶಾಲಾ ವಾರ್ಷಿಕೋತ್ಸವ ಎಸ್‌ಆರ್‌ಎಸ್ ಪ್ರಜ್ಞೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಟಿ.ಎಚ್.ಅಪ್ಪಾಜಿಗೌಡ, ಡಾ.ಎಚ್.ಎಲ್.ಮಲ್ಲೇಶ್‌ಗೌಡ, ಕೆ.ಎನ್ ಬಲರಾಮ್, ಕೆ. ರಂಗನಾಥ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾನವೀಯ ಮೌಲ್ಯ ಕಲಿಸಿದರೆ ಪರಿಪೂರ್ಣವಾಗಲಿದೆ ಶಿಕ್ಷಣ
  • ನಿವೃತ್ತ ಪ್ರಾಂಶುಪಾಲ ಟಿ.ಎಚ್.ಅಪ್ಪಾಜಿಗೌಡ ಅಭಿಮತ
  • ಎಸ್‌ಆರ್‌ಎಸ್ ಪ್ರಜ್ಞೋತ್ಸವ ಸಮಾರಂಭ ಉದ್ಘಾಟನೆ
ಹಾಸನ: ಪಾಲಕರು ಮಕ್ಕಳಲ್ಲಿ ವಿದ್ಯೆ ಜತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಿದಾಗ ಮಾತ್ರ ವಿದ್ಯೆ ಪರಿಪೂರ್ಣವಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಟಿ.ಎಚ್.ಅಪ್ಪಾಜಿಗೌಡ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಎಸ್‌ಆರ್‌ಎಸ್ ಪ್ರಜ್ಞಾ ವಿದ್ಯಾಶಾಲೆ ವಾರ್ಷಿಕೋತ್ಸವ ಪ್ರಯುಕ್ತ ಇತ್ತೀಚೆಗೆ ಆಯೋಜಿಸಿದ್ದ ಎಸ್‌ಆರ್‌ಎಸ್ ಪ್ರಜ್ಞೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪ್ರತಿಯೊಂದು ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಿರಬೇಕು. ವಿನಯ ಹಾಗೂ ಗೌರವದಿಂದ ನಡೆದುಕೊಳ್ಳುವುದನ್ನು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕಲಿಸಿಕೊಡಬೇಕು ಎಂದು ಸಲಹೆ ನೀಡಿದರು.
ಎರಡನೇ ದಿನದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್‌ಗೌಡ, ಮೂರನೇ ದಿನದ ಕಾರ್ಯಕ್ರಮದಲ್ಲಿ ಕೆ.ಎನ್ ಬಲರಾಮ್, ಕೆ. ರಂಗನಾಥ್ ಇತರರಿದ್ದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಮೂರು ದಿನಗಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಆರ್.ರಾಜಗೋಪಾಲ ಶೆಟ್ಟಿ ವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯ, ಭರತನಾಟ್ಯದ ವಿವಿಧ ಪ್ರಕಾರಗಳು, ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯನ್ನು ಬಿಂಬಿಸುವ ನಾಟಕಗಳು, ಸತ್ಯ, ಪ್ರಾಮಾಣಿಕತೆ, ಪ್ರಕೃತಿ, ಸೌಂದರ್ಯವನ್ನು ವರ್ಣಿಸುವ ನೃತ್ಯಗಳು, ಕ್ರೀಡಾ ಪಿರಮಿಡ್‌ಗಳ ರಚನೆ, ಕರಾಟೆ ಸಾಹಸಗಳು, ಯೋಗಿಕ್ ನೃತ್ಯಗಳು, ಮಿನಿ ಐಪಿಎಲ್, ಹೊಯ್ಸಳರು, ರಾಷ್ಟ್ರಕೂಟರು, ಮಹಾಭಾರತ ಹಾಗೂ ರಾಮಾಯಣದ ಕೆಲವು ದೃಷ್ಟಾಂತಗಳಿಗೆ ಸಂಬಂಧಿಸಿದ ಕಿರುನಾಟಕಗಳು, ಕೃಷ್ಣಾವತಾರ, ಮಹಾಕಾಳಿ, ಪುಣ್ಯಕೋಟಿ, ಹುಪ್ಸ್ ಮತ್ತು ಡಂಬಲ್ಸ್, ಶಿವತಾಂಡವ, ಸ್ವಾತಂತ್ರೃ ಹೋರಾಟದ ನೃತ್ಯ ರೂಪಕ, ಕಥಕ್, ಉಗ್ರ ನರಸಿಂಹ, ಆಪರೇಷನ್ ಸಿಂಧೂರ್, ಸಂಸ್ಕೃತ ಶ್ಲೋಕ ಪಠಣ, ಬ್ರಹ್ಮ ಕಲಶ, ವಿವಿಧ ಬಗೆಯ ಜಾನಪದ ನೃತ್ಯಗಳು, ವಿವಿಧ ರಾಜ್ಯಗಳ ವೇಷಭೂಷಣಗಳು ಹಾಗೂ ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸಂಸ್ಥೆ ಟ್ರಸ್ಟಿಗಳಾದ ಆರ್.ರವೀಶ್, ಸವಿತಾ ರವೀಶ್, ಕಾರ್ಯದರ್ಶಿ ಎಂ.ನಟರಾಜ್, ಆಶಾ ನಟರಾಜ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net