ನಗರದ ಬಸವೇಶ್ವರ ವೃತ್ತದಲ್ಲಿ ಡ್ರೋನ್ ಕ್ಯಾಮರಾ ಕಾರ್ಯಾಚರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಬ್ಬ, ಹರಿದಿನ, ಉತ್ಸವಗಳು ಶಾಂತ ರೀತಿಯಲ್ಲಿ ನಡೆಯಲು ಇಲಾಖೆ ಎಲ್ಲ ರೀತಿಯ ಸಹಕಾರ ನೀಡುತ್ತಾ ಬಂದಿದೆ. ಡ್ರೋನ್ ಬಳಕೆಯಿಂದ ಜನ ಸಂದಣಿ ವೇಳೆ ಗಲಭೆ, ಗಲಾಟೆಗೆ ಕಡಿವಾಣ ಬೀಳಲಿದೆ. ಇಲಾಖೆ ಉನ್ನತಾಧಿಕಾರಿಗಳ ಮಾರ್ಗದರ್ಶನದಡಿ ಪ್ರಾಯೋಗಿಕ ಪರೀಕ್ಷೆ ಮಾಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಇಲಾಖೆ ಕಾರ್ಯಕ್ಕೆ ಹೆಚ್ಚಿನ ಉಪಯೋಗವಾಗುವುದರಲ್ಲಿ ಅನುಮಾನವಿಲ್ಲ ಎಂದರು.