ನಾಟಕಗಳಿಗೆ ಯುವಪೀಳಿಗೆ ಬೆಂಬಲ ಅಗತ್ಯ

 ಹೊಳೆನರಸೀಪುರ ಪಟ್ಟಣದ ಬಯಲು ರಂಗಮಂದಿರದಲ್ಲಿ ಒಂಬತ್ತು ದಿನಗಳ ನಾಟಕೋತ್ಸವದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಸಿಗರನಹಳ್ಳಿ ಚಂದ್ರಶೇಖರ್, ರಂಗಭೂಮಿ ಕಲಾವಿದ ಯಲಗುಂದ ಶಾಂತಕುಮಾರ್ ಇತರರು ಇದ್ದರು.
ಹೊಳೆನರಸೀಪುರ ಪಟ್ಟಣದ ಬಯಲು ರಂಗಮಂದಿರದಲ್ಲಿ ಒಂಬತ್ತು ದಿನಗಳ ನಾಟಕೋತ್ಸವದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಸಿಗರನಹಳ್ಳಿ ಚಂದ್ರಶೇಖರ್, ರಂಗಭೂಮಿ ಕಲಾವಿದ ಯಲಗುಂದ ಶಾಂತಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಟಕೋತ್ಸವ ಕಾರ್ಯಕ್ರಮ
  • ರಂಗಭೂಮಿ ಕಲಾವಿದ ಯಲಗುಂದ ಶಾಂತಕುಮಾರ್ ಅಭಿಪ್ರಾಯ
ಹೊಳೆನರಸೀಪುರ: ಕಲಾವಿದರಿಗೆ ವರದಾನ ನಾಟಕೋತ್ಸವ. ಇಂತಹ ನಾಟಕೋತ್ಸವದಲ್ಲಿ ವಿವಿಧ ಹಳ್ಳಿಗಳಿಂದ, ನಗರಗಳಿಂದ ಬರುವ ವಿವಿಧ ತಂಡದ ಕಲಾವಿದರು ನಿಮ್ಮ ಮುಂದೆ ಪ್ರದರ್ಶನ ಮಾಡಿ, ಕಲೆಯ ರಸದೌತಣ ಉಣ ಬಡಿಸುತ್ತಾರೆ ಎಂದು ರಂಗಭೂಮಿ ಕಲಾವಿದ ಯಲಗುಂದ ಶಾಂತಕುಮಾರ್ ತಿಳಿಸಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ದೊಡ್ಡಮ್ಮದೇವಿ ಕಲಾ ಮತ್ತು ಸಾಂಸ್ಕೃತಿಕ ಸಂಘ ಅರಕಲಗೂಡಿನ ಕಲಾವಿದರು, ಹಾಸನ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ನೇತೃತ್ವದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಒಂಬತ್ತು ದಿನಗಳ ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲೆಗೆ ನಮ್ಮ ದೇಶದಲ್ಲಿ ವಿಶಿಷ್ಟವಾದ ಸ್ಥಾನಮಾನವಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿ ಹಳ್ಳಿಯಲ್ಲಿ ಕಲೆ, ಸಂಸ್ಕೃತಿಯನ್ನು ನಾವು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತಿದ್ದೇವೆ. ಆದರೆ ವಿದೇಶದಲ್ಲಿ ಇಂತಹ ಕಲೆ ಬೆರಳಣೆಕೆಯಷ್ಟು ಇದೆ. ಕಲಾವಿದರು ಅಭಿನಯಿಸಿ ನಿಮ್ಮ ಮುಂದೆ ಪ್ರದರ್ಶನ ಮಾಡುವುದರ ಮೂಲಕ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಸರ್ಕಾರ ಅಲ್ಪ, ಸ್ವಲ್ಪ ಕೊಟ್ಟು ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಇವತ್ತು ಕೇವಲ ಹಿರಿಯರು ಇಂತಹ ಕಲೆಯಲ್ಲಿ ಆಸಕ್ತಿಯಿಂದ ಅಭಿನಯಿಸುತ್ತಿದ್ದು ಯುವ ಪೀಳಿಗೆ, ಕಾಲೇಜು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ಯುವ ಪೀಳಿಗೆಯನ್ನು ಈ ಕಲೆಯ ಕಡೆಗೆ ಕರೆದುಕೊಂಡು ಬಂದಾಗ ಮಾತ್ರ ನಮ್ಮ ಕಲೆ ಇನ್ನೂ ಸಮೃದ್ಧಿಯಾಗುತ್ತದೆ ಎಂದರು.
ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಸಂಪತ್ ಮಾತನಾಡಿ, ನಮ್ಮ ತಾಲೂಕಿನ ಸ್ವಾಮಿಗೌಡ ಅವರಿಗೆ ಡಿ.12 ರಂದು ದೆಹಲಿಯಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಫೆಲೋಶಿಪ್ ಅವಾರ್ಡ್ ನೀಡಿ ಗೌರವಿಸಲಾಗುತ್ತಿದೆ. ಕಲಾವಿದರು ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಹಾಸನ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಮಾತನಾಡಿ, ಇದೇ ಪ್ರಥಮ ಬಾರಿಗೆ ಹೊಳೆನರಸೀಪುರದ ಬಯಲು ರಂಗಮಂದಿರದಲ್ಲಿ ಹಗಲು ನಾಟಕೋತ್ಸವವನ್ನು ಆಯೋಜಿಸಿರುವುದು ಸಂತಸವಾಗಿದೆ. ಟಿವಿ ಅಬ್ಬರದಿಂದ ರಾತ್ರಿ ವೇಳೆ ನಾಟಕ ನೋಡುವವರ ಸಂಖ್ಯೆ ಬಹಳ ಕಡಿಮೆಯಾಗಿದೆ ಎಂದರು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಈಶ್ವರ್ ಗೌಡ, ಮಾಜಿ ಯೋಧ ಮಂಜುನಾಥ್, ಬೀಚೇನಹಳ್ಳಿ ಕೃಷ್ಣಮೂರ್ತಿ, ಸಮಾಜ ಸೇವಕ ದಿವಾಕರ್, ಬೇಕರಿ ರಾಜೇಗೌಡ, ಕೇಶವ, ಶಂಕರ್, ಈರೇಗೌಡರು, ವನಜಾಕ್ಷಿ, ಶಿಲ್ಪಾ, ನರಸಿಂಹಮೂರ್ತಿ, ಸ್ವಾಮಿ, ಗೋಪಾಲಶೆಟ್ಟಿ ರಂಗಸ್ವಾಮಿ, ಗಿರೀಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net