ಗ್ಯಾಸ್ ಬಳಕೆಯ ವಾಹನ ಸವಾರರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಗ್ಯಾಸ್‌ಬಂಕ್‌ಗಳಲ್ಲಿ ಅನಿಲ ಲಭ್ಯವಿಲ್ಲದ ಕಾರಣ ವಾಹನಗಳನ್ನು ಓಡಿಸಲು ತೊಂದರೆ ಉಂಟಾಗಿದೆ. ಕಳೆದ ಎರಡು ದಿನಗಳ ಹಿಂದೆ ಕಿ.ಲೋ.ಗೆ 55 ರೂ. ಇದ್ದ ಎಲ್‌ಪಿಜಿ ದರ ಈಗ 75ಕ್ಕೆ ಏರಿಕೆಯಾಗಿರುವುದರಿಂದ ಆಟೋ ಚಾಲಕರು ಹೆಚ್ಚುವರಿ ಆರ್ಥಿಕ ಹೊರೆ ಎದುರಿಸುತ್ತಿದ್ದಾರೆ. ಬಾಡಿಗೆ ಕಡಿಮೆ ಇರುವ ಸಂದರ್ಭದಲ್ಲಿ ದಿಢೀರ್ ದರ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಜತೆಗೆ ಇಂದಿರಾ ಕ್ಯಾಂಟೀನ್‌ಗಳು, ಹಾಸ್ಟೆಲ್‌ಗಳು, ಪಿಜಿ ವಸತಿ ಗೃಹಗಳು ಸೇರಿದಂತೆ ಹಲವು ಕಡೆಗಳಲ್ಲಿಯೂ ಗ್ಯಾಸ್ ಪೂರೈಕೆಯ ಸಮಸ್ಯೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.