ಮಧುಮೇಹದಿಂದ ಅಂಗಾಂಗದ ವೈಫಲ್ಯತೆ ಹೆಚ್ಚು

ಬಾಗೂರು ಹೋಬಳಿಯ ಪುರಾಣ ಪ್ರಸಿದ್ಧ  ನಾಗರನವಿಲೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬೃಹತ್ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು  ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎನ್. ಪರಮೇಶ್, ಹೃದಯರೋಗ ತಜ್ಞ ಡಾ.ವಿವೇಚನ್, ಡಾ.ಶ್ರೀಧರ್, ಡಾಕ್ಟರ್ ಸಿ.ಎಸ್.ನಾಗೇಶ್, ಡಾ.ಎನ್.ಎಂ.ಜೀವನ, ಡಾ.ರಮೇಶ್ ಬಾಬು ಇದ್ದರು.
ಬಾಗೂರು ಹೋಬಳಿಯ ಪುರಾಣ ಪ್ರಸಿದ್ಧ ನಾಗರನವಿಲೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬೃಹತ್ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎನ್. ಪರಮೇಶ್, ಹೃದಯರೋಗ ತಜ್ಞ ಡಾ.ವಿವೇಚನ್, ಡಾ.ಶ್ರೀಧರ್, ಡಾಕ್ಟರ್ ಸಿ.ಎಸ್.ನಾಗೇಶ್, ಡಾ.ಎನ್.ಎಂ.ಜೀವನ, ಡಾ.ರಮೇಶ್ ಬಾಬು ಇದ್ದರು.
Published on

ಶಾಸಕ ಸಿ.ಎನ್.ಬಾಲಕೃಷ್ಣ ಕಳವಳ ಬೃಹತ್ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ

ಬಾಗೂರು (ನುಗ್ಗೇಹಳ್ಳಿ): ಇಡೀ ವಿಶ್ವದಲ್ಲಿಯೇ ಭಾರತ ದೇಶದಲ್ಲಿ ಅತಿ ಹೆಚ್ಚು ಮಧುಮೇಹಿ ರೋಗಿಗಳಿದ್ದು, ಈ ಕಾಯಿಲೆಯಿಂದ ರೋಗಿಗಳಲ್ಲಿ ಅಂಗಾಂಗದ ವೈಫಲ್ಯತೆ ಹೆಚ್ಚಾಗಲು ಮೂಲ ಕಾರಣವಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಕಳವಳ ವ್ಯಕ್ತಪಡಿಸಿದರು.
ಹೋಬಳಿಯ ಪುರಾಣ ಪ್ರಸಿದ್ಧ ನಾಗರನವಿಲೆ ಗ್ರಾಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ಜಿಲ್ಲಾ ಘಟಕ ಮತ್ತು ಶ್ರೀ ನಾಗೇಶ್ವರಸ್ವಾಮಿ ಕಲ್ಯಾಣ ಮಂಟಪ ಟ್ರಸ್ಟ್ ಮತ್ತು ನವಿಲೆ ಗೆಳೆಯರ ಬಳಗ, ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ತಿಪಟೂರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ನೆರವದೊಂದಿಗೆ ಆಯೋಜಿಸಲಾಗಿದ್ದ ಬೃಹತ್ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಮಧುಮೇಹಿ ರೋಗಿಗಳು ಹೆಚ್ಚಾಗುತ್ತಿದ್ದು ಇದಕ್ಕೆ ಮೂಲ ಕಾರಣ ಸರಿಯಾದ ಆಹಾರ ಪದ್ಧತಿ ಇಲ್ಲದೇ ಇರುವುದು ಕಾಯಿಲೆ ಬರಲು ಮುಖ್ಯ ಕಾರಣವಾಗಿದೆ. ಈ ಕಾಯಿಲೆಯಿಂದ ರೋಗಿಗಳಲ್ಲಿ ಕಣ್ಣಿನ ತೊಂದರೆ ಕಿಡ್ನಿ, ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ಮನುಷ್ಯನ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸುವುದು ಸೂಕ್ತ ಎಂದರು.
ರೋಟರಿ ಸಂಸ್ಥೆಯ ತಿಪಟೂರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಶ್ರೀ ನಾಗೇಶ್ವರಸ್ವಾಮಿ ಕಲ್ಯಾಣ ಮಂಟಪ ಟ್ರಸ್ಟ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಬೃಹತ್ ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯುತ್ತಿದ್ದು ಇದು ಕೇವಲ ನವಿಲೆ ಗ್ರಾಮ ಪಂಚಾಯಿತಿ ಮಟ್ಟದ ಆರೋಗ್ಯ ಶಿಬಿರವಾಗದೆ ನವಿಲೆ ಎನ್.ಪರಮೇಶ್ವರ್ ಅವರ ಶ್ರಮದಿಂದ ತಾಲೂಕು ಮಟ್ಟದ ಆರೋಗ್ಯ ಶಿಬಿರವಾಗಿ ಮಾರ್ಪಟ್ಟಿದೆ ಎಂದರು.
ತಿಪಟೂರಿನ ಡಾ.ವಿವೇಚನ್, ಡಾ.ಶ್ರೀಧರ್, ಡಾ.ಸಿ.ಎಸ್.ನಾಗೇಶ್ ಅವರು ನಿರಂತರ ಜನ ಸೇವೆಯಲ್ಲಿ ತೊಡಗಿದ್ದು ವೈದ್ಯೋ ನಾರಾಯಣ ಹರಿ ಎಂಬ ಮಾತಿಗೆ ಮೂರು ಜನರ ಕಾರ್ಯವೈಖರಿ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್ ಮಾತನಾಡಿ, ನನ್ನ ಹುಟ್ಟೂರಿನ ಜನರಿಗೆ ಹಾಗೂ ತಾಲೂಕಿನ ಜನರಿಗೆ ಅನುಕೂಲವಾಗಲೆಂದು ಶಿಬಿರವನ್ನು ಏರ್ಪಡಿಸಲಾಗಿದೆ. ಇಲ್ಲಿ ರೋಗಿಗಳಿಗೆ ಉಚಿತವಾಗಿ ಔಷಧಗಳನ್ನು ವಿತರಣೆ ಮಾಡಲಾಗುತ್ತಿದೆ. ನಾನು ಹಾಗೂ ರೋಟರಿ ಸಂಸ್ಥೆ ಮತ್ತು ಶಾಸಕ ಸಿ.ಎನ್. ಬಾಲಕೃಷ್ಣ ಅವರ ಸಹಕಾರದೊಂದಿಗೆ ನವಿಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಸುವುದಾಗಿ ಭರವಸೆ ನೀಡಿದರು.
ತಿಪಟೂರು ಶ್ರೀರಂಗ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ವಿವೇಚನ್, ತಿಪಟೂರು ಕುಮಾರ ಆಸ್ಪತ್ರೆ ಜನರಲ್ ಸರ್ಜನ್ ಡಾ.ಶ್ರೀಧರ್ ಮಾತನಾಡಿದರು. ಶಿಬಿರಕ್ಕೆ ಸುವರ್ಣ ಶ್ರೀ ಶಂಕರ ಲಿಂಗಪ್ಪ ಎಜುಕೇಷನ್ ಮತ್ತು ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ತಿಪಟೂರು ಹಾಗೂ ಶೇಖರ್ ಆಸ್ಪತ್ರೆ, ಶೇಖರ್ ರಕ್ತನಿಧಿ ಕೇಂದ್ರ ಶಿಬಿರದ ಯಶಸ್ಸಿಗೆ ಹೆಚ್ಚಿನ ಸಹಕಾರ ನೀಡಿದವು.
ನೂರಾರು ಸಂಖ್ಯೆಯಲ್ಲಿ ಜನರು ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ವಿವಿಧ ಕಾಯಿಲೆಗಳಿಗೆ ತಪಾಸಣೆ ಮಾಡಿಸಿಕೊಂಡರು. ಕೆಲವರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ತಿಪಟೂರು ಆರ್ಥೋ ಸುರಕ್ಷಾ ಮಲ್ಟಿ ಆಸ್ಪತ್ರೆಯ ಡಾ.ಸಿ.ಎಸ್.ನಾಗೇಶ್, ಡಾ.ರಮೇಶ್‌ಬಾಬು, ಡಾ.ಬಸವ ಪ್ರಸಾದ್, ಡಾ.ಎನ್.ಎಂ.ಜೀವನ್, ರೋಟರಿ ಸಂಸ್ಥೆ ತಿಪಟೂರು ಅಧ್ಯಕ್ಷೆ ರೋ.ವನಿತಾ ಪ್ರಸನ್ನ, ಕಾರ್ಯದರ್ಶಿ ರೋ. ಟಿ.ಎಸ್. ಕೋಮಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪವಿತ್ರಾ ಪರಮೇಶ್, ನಾಗೇಶ್ವರ ಕಲ್ಯಾಣ ಮಂಟಪ ಟ್ರಸ್ಟ್ ಅಧ್ಯಕ್ಷ ಎನ್.ಕೆ.ನಾಗಪ್ಪ, ಕೃಷಿ ಪತ್ತಿನ ಅಧ್ಯಕ್ಷ ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ದೇವರಾಜ್, ಎಂಪಿಎಸ್ ಅಧ್ಯಕ್ಷ ಎನ್.ಎಸ್.ವೇದಾಂತ್, ವೈದ್ಯರಾದ ತುರುವೇಕೆರೆ ರೋಟರಿ ಕ್ಲಬ್ ಅಧ್ಯಕ್ಷ ಪ್ರಭುಸ್ವಾಮಿ, ಮುಖಂಡರಾದ ಪುಟ್ಟರಾಜು, ಉದ್ಯಮಿ ಚಿಪ್ಪಿನ ಚಂದ್ರು, ಹೊಸೂರು ಚಂದ್ರಪ್ಪ, ಎಂ.ಎಸ್. ಸುರೇಶ್, ಎನ್.ಆರ್.ಕೃಪಾ ಶಂಕರ್, ಹುಲಿಕೆರೆ ಸಂಪತ್‌ಕುಮಾರ್, ಚಿರಂಜೀವಿ, ದೊಡಗನ್ನಿ ಸತೀಶ್, ಸೇರಿದಂತೆ ನವಿಲೆ ಗೆಳೆಯರ ಬಳಗದ ಸದಸ್ಯರು ಹಾಗೂ ಗ್ರಾಮಸ್ಥರು, ಸಿಬ್ಬಂದಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net