ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ ಗೌಡ ಮಾತನಾಡಿ, ಜಾನಪದ ಕಲೆಗಳು ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬ. ನಮ್ಮ ಸಂಸ್ಕೃತಿ ಹಾಗೂ ದೇಶಿಯ ಸೊಗಡಾಗಿರುವ ಇವು ನಮ್ಮ ನಾಗರಿಕತೆಯ ಸಂಕೇತವಾಗಿವೆ. ಈ ಕಲೆಗಳನ್ನು ಉಳಿಸಿ ಬೆಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಜನಪದ ಹಾಡು, ಜನಪದ ನೃತ್ಯ, ಬೀಸುಕಲ್ಲಿನ ಪದ, ಜೋಗುಳ ಪದ ಇಂತಹ ಅನೇಕ ಹಾಡುಕುಣಿತಗಳು ಕೃಷಿ ಬದುಕು ಹಾಗೂ ಹಳ್ಳಿ ಬದುಕಿನಲ್ಲಿ ಮೂಡಿಬಂದ ಅದ್ಭುತ ಕಲೆಗಳಾಗಿವೆ. ಇವುಗಳಲ್ಲಿ ದೇಸೀಯ ಸೊಗಡಿನ ಜತೆಗೆ ಸಮಾಜದ ಅಂತಕರಣ ಅದರಲ್ಲಿ ಅಡಗಿದೆ. ಜನಪದರು ತಮ್ಮ ಅನುಭಾವದ ನೆಲೆಯ ಮೇಲೆ ಜನಪದ ಗೀತೆಗಳನ್ನು ರಚಿಸಿದ್ದಾರೆ. ಅವುಗಳ ಅನುಕರಣೆ ಇಂದಿನ ಪೀಳಿಗೆಗೆ ಅವಶ್ಯವಾಗಿದೆ. ಸಿನಿಮೀಯ ಬದುಕು ಬಿಟ್ಟು ದೇಶಿ ಸಂಸ್ಕೃತಿಯಲ್ಲಿ ತೊಡಗಿಸಿಕೊಳ್ಳಲು ಯುವ ಸೌರಭ ಸಹಕಾರಿಯಾಗಲಿ ಎಂದರು. ನಂತರ ನಸ್ಕೃಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವ ಕಲಾವಿದರು ನೀಡಿದ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಂಡವು. ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಬಿ.ಆರ್. ಪ್ರಜ್ವಲ್ ಜನಪದ ಗೀತೆ, ಉಷಾರಾಣಿ ಮತ್ತು ತಂಡದವರಿಂದ ಜಾನಪದ ಗೀತ ಗಾಯನ, ಸಿ.ಎಸ್.ಪ್ರೇಕ್ಷಾ ಮತ್ತು ತಂಡ ಹರ್ಷಿತಾ ಮತ್ತು ತಂಡ, ಚೈತನ್ಯ ಮತ್ತು ತಂಡದವರಿಂದ ಜಾನಪದ ನೃತ್ಯ, ದೀಕ್ಷಿತ ಮತ್ತು ತಂಡದವರಿಂದ ಜಾನಪದ ಕಿರು ನಾಟಕ ಪ್ರದರ್ಶನಗೊಡವು.