ತಂಬಾಕು ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಹೆಚ್ಚುತ್ತಿದೆ. ಆರಂಭಿಕ ಹಂತದಲ್ಲೇ ರಸಗೊಬ್ಬರ, ಟ್ರೇಗಳು, ಕೋಕೋಫಿಟ್ ಔಷಧಗಳು, ಬಿತ್ತನೆ ಬೀಜ, ಕಾರ್ಮಿಕರ ಕೂಲಿ ಸೇರಿದಂತೆ ಕಚ್ಚಾ ಪದಾರ್ಥಗಳ ವೆಚ್ಚ ಏರಿಕೆಯಾಗುತ್ತಿದೆ. ಬೆಳೆ ಕಟಾವು ನಂತರ ತಂಬಾಕು ಬೇಯಿಸಲು ಬೇಕಾದ ಸೌದೆ, ಕೂಲಿ, ಬೇಲ್ ಮಾಡುವ ಖರ್ಚು ಹಾಗೂ ಇತರೆ ಅಂತಿಮ ಹಂತದ ವೆಚ್ಚಗಳು ರೈತರ ಮೇಲೆ ಭಾರವಾಗಿವೆ. ಈ ಎಲ್ಲ ವೆಚ್ಚಗಳನ್ನು ಲೆಕ್ಕಹಾಕಿದರೆ ಪ್ರತಿ ಕೆ.ಜಿ ತಂಬಾಕಿಗೆ ಕನಿಷ್ಠ 350ರೂ. ದೊರೆತರೆ ಮಾತ್ರ ರೈತರಿಗೆ ಸಮರ್ಪಕ ಆದಾಯ ಸಾಧ್ಯವಾಗುತ್ತದೆ ಎಂದರು.