ಪ್ರಸ್ತುತ ನಿಗದಿಪಡಿಸಿರುವ ವೇತನವು ಕಾರ್ಮಿಕರ ಜೀವನ ನಿರ್ವಹಣಾ ವೆಚ್ಚಕ್ಕೆ ಪೂರಕವಾಗಿಲ್ಲ. ಸುಪ್ರೀಂ ಕೋರ್ಟ್ 1992ರ ‘ವರ್ಕ್‌ಮೆನ್ ವರ್ಸಸ್ ರೆಪ್ಟಾಕೋಸ್ ಬ್ರೆಟ್ ಆ್ಯಂಡ್ ಕಂಪನಿ’ ಪ್ರಕರಣದಲ್ಲಿ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಕಾರ್ಮಿಕ ಮತ್ತು ಅವರ ಕುಟುಂಬದ ಜೀವನ ನಿರ್ವಹಣೆಗೆ ಅಗತ್ಯವಿರುವ ಆಹಾರ, ವಸತಿ, ಶಿಕ್ಷಣ, ಆರೋಗ್ಯ, ಸಾರಿಗೆ ಹಾಗೂ ಇತರ ಮೂಲ ಸೌಕರ್ಯ ಅಗತ್ಯಗಳನ್ನು ಪರಿಗಣಿಸಿ ವೇತನ ನಿಗದಿಪಡಿಸಬೇಕಾಗಿದೆ. ಇದೇ ಮಾನದಂಡಗಳನ್ನು ಆಧರಿಸಿ ರಾಜ್ಯದಲ್ಲಿ ಕನಿಷ್ಠ ವೇತನ ಪರಿಷ್ಕರಿಸಬೇಕೆಂದು ಕರ್ನಾಟಕ ಹೈಕೋರ್ಟ್ ಕೂಡ ನಿರ್ದೇಶನ ನೀಡಿತ್ತು. ಆದರೆ ಈ ಮಾನದಂಡಗಳಿಗೆ ಸರ್ಕಾರದ ಇತ್ತೀಚಿನ ಅಧಿಸೂಚನೆ ಸಂಪೂರ್ಣವಾಗಿ ಅನುಗುಣವಾಗಿಲ್ಲ ಎಂದು ಆರೋಪಿಸಿದರು.