ಕಾರ್ಯಕ್ರಮದ ಹಿನ್ನೆಲೆ ನಗರದಾದ್ಯಂತ ದೊಡ್ಡ ದೊಡ್ಡ ಕಟೌಟ್ ಹಾಕುವ ಮೂಲಕ ರಾಜಕೀಯ ನಾಯಕರ ಭಾವಚಿತ್ರ ಅಳವಡಿಸಲಾಗಿತ್ತು. ಆದರೆ, ಇದಕ್ಕಾಗಿ ಬಳಸಿರುವ ಹಣ ಯಾರ ಮನೆಯದ್ದು. ಜಿಲ್ಲಾಡಳಿತ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಿದ್ದು, ಕೋಟ್ಯಂತರ ರೂ. ಹಣವನ್ನು ವ್ಯಯಮಾಡಿದೆ. ಅಲ್ಲದೆ ಜನರನ್ನು ಕರೆಸುವ ಉದ್ದೇಶದಿಂದ ಸಾವಿರಾರು ಬಸ್‌ಗಳನ್ನು ಬಳಸಿಕೊಂಡಿದೆ. ಇದಕ್ಕೆ ನೀಡುವ ಹಣ ಯಾರ ಮನೆಯದ್ದು, ಈ ಎಲ್ಲ ಪ್ರಶ್ನೆಗಳಿಗೂ ಜಿಲ್ಲಾಡಳಿತ ಹಾಗೂ ಸರ್ಕಾರ ಉತ್ತರ ನೀಡಬೇಕಿದೆ. ಜನರು ಇದರ ಬಗ್ಗೆ ಯೋಚನೆ ಮಾಡಬೇಕು, ಯಾರ ಹಣದಿಂದ ಇಷ್ಟೆಲ್ಲ ಕಾರ್ಯಕ್ರಮ ಮಾಡಿ ವೈಭವೀಕರಿಸಲು ಹೊರಟಿದ್ದಾರೆ ಎಂಬುದು ಸಾರ್ವಜನಿಕರಿಗೆ ತಿಳಿಯಬೇಕು ಎಂದರು.