ಹೈನುಗಾರರು ಮೇವು ಸಂಗ್ರಹಿಸಿಕೊಳ್ಳಿ

ವಳಗೆರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮೇಲಂತಸ್ತಿನ ನೂತನ ಕಟ್ಟಡವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ನಂದೀಶ್, ಮಂಜುನಾಥ್, ದಯಾನಂದ್, ರಾಮಚಂದ್ರು, ಬೋರೇಗೌಡ, ದೇವರಾಜ್, ಗಿರೀಶ್, ಜ್ಯೋತಿ, ಕಲ್ಪನಾ, ಪ್ರೀತಿಕುಮಾರಿ ಇದ್ದರು.
ವಳಗೆರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮೇಲಂತಸ್ತಿನ ನೂತನ ಕಟ್ಟಡವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ನಂದೀಶ್, ಮಂಜುನಾಥ್, ದಯಾನಂದ್, ರಾಮಚಂದ್ರು, ಬೋರೇಗೌಡ, ದೇವರಾಜ್, ಗಿರೀಶ್, ಜ್ಯೋತಿ, ಕಲ್ಪನಾ, ಪ್ರೀತಿಕುಮಾರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ ಸಲಹೆ
ಬಾಗೂರು: ಹೈನುಗಾರಿಕೆಯು ಚನ್ನರಾಯಪಟ್ಟಣ ತಾಲೂಕಿನ ರೈತರ ಕೈ ಹಿಡಿಯುವ ಮುಖ್ಯ ಉಪಕಸುಬ ಆಗಿದ್ದು, ಮಳೆ ಕೈಕೊಟ್ಟಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೇವು ಸಂಗ್ರಹಿಸಿಕೊಳ್ಳುವುದು ಸೂಕ್ತ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿಯ ವಳಗೇರಹಳ್ಳಿ ಗ್ರಾಮದಲ್ಲಿ ಶುಕ್ರವಾರ 10 ಲಕ್ಷ ರೂ. ವೆಚ್ಚದ ಹಾಲು ಉತ್ಪಾದಕರ ಸಹಕಾರ ಸಂಘದ ಮೇಲಂತಸ್ತಿನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ 340 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ದಿನಕ್ಕೆ 3 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮಳೆ ಅಭಾವದಿಂದ ಹಸುಗಳ ಮೇವಿಗೆ ತೊಂದರೆಯಾಗುವ ಮೊದಲೇ ಕೊಳವೆ ಬಾವಿಗಳ ನೀರಿನ ಮೂಲಕ ಮೇವು ಬೆಳೆದು ಸಂಗ್ರಹಿಸಿಕೊಳ್ಳುವಂತೆ ಸಲಹೆ ನೀಡಿದರು.
ಹಾಸನ ಹಾಲು ಒಕ್ಕೂಟದ 900 ಕೋಟಿ ರೂ. ವೆಚ್ಚದ ಮೆಗಾ ಡೈರಿ ನಾಲ್ಕು ತಿಂಗಳಲ್ಲಿ ಪ್ರಾರಂಭವಾಗುತ್ತದೆ. ನಂತರ ಜಿಲ್ಲೆಯ ರೈತರಿಗೆ ಹಾಲಿನ ದರ ಹೆಚ್ಚಿಸಲು ಯೋಜನೆ ರೂಪಿಸಲಾಗುವುದು. ತಾಲೂಕಿನಲ್ಲಿ 6 ಕೋಟಿ ರೂ. ವೆಚ್ಚದ ರಿಯಾಯಿತಿ ದರದ ಹಸುಗಳ ಮ್ಯಾಟ್ ವಿತರಿಸಲಾಗಿದೆ. ಡೈರಿಗಳನ್ನು ಉಳಿಸಿ ಬೆಳೆಸಲು ಗುಣಮಟ್ಟದ ಹಾಲು ಹಾಕಿ ಎಂದರು.
ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ಆರ್.ನಂದೀಶ್, ಸಹಾಯಕ ವ್ಯವಸ್ಥಾಪಕ ಎಂ.ದಯಾನಂದ್, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವರಾಜ್, ಬೋರೇಗೌಡ, ಗಿರೀಶ್, ರಂಗೇಗೌಡ, ಜಯರಾಮ್, ಚಂದ್ರೇಗೌಡ, ದೇವರಾಜು, ನಿರ್ದೇಶಕರಾದ ರಾಮಕೃಷ್ಣ, ಮಹೇಶ್, ಯೋಗೇಶ್, ಚಂದ್ರು, ಬಿ.ಎಂ.ಜ್ಯೋತಿ ಜಯರಾಮ್, ಕಲ್ಪನಾ ಚಿಕ್ಕೇಗೌಡ, ಪ್ರೀತಿಕುಮಾರಿ, ಕಾರ್ಯದರ್ಶಿ ಬಿ.ಎನ್.ಪುನೀತ್ ಕುಮಾರ್, ಸಹಾಯಕ ಚಿಕ್ಕೇಗೌಡ, ಪರೀಕ್ಷಕ ಬೋರೇಗೌಡ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net