ಹಾಸನ ನಗರದ ಬೂವನಹಳ್ಳಿ ಕೂಡು ಬಳಿ ಇರುವ ಶ್ರೀ ರಂಗನಾಥಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾತೃಭೋಜನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ನಾಗರತ್ನ ಜವರೇಗೌಡ ಅವರನ್ನು ಸನ್ಮಾನಿಸಲಾಯಿತು. ಪೂಜಾ ರಘುನಂದನ್, ರಾಷ್ಟ್ರಸೇವಾ ಸಮಿತಿಯ ಮಮತಾ ಮಂಜುನಾಥ್, ಬಿ.ವಿ.ಶ್ರೀನಿವಾಸ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಂಸ್ಕೃತಿ, ಸಂಸ್ಕಾರ ಬಾಲ್ಯದಿಂದಲೇ ಮನೆ ಮಾಡಲಿ
ನಾಗರತ್ನಾ ಜವರೇಗೌಡ ಸಲಹೆ
ಹಾಸನ: ಭಾರತೀಯ ಸಂಸ್ಕೃತಿ, ಸಂಸ್ಕಾರ ಬಾಲ್ಯದಿಂದಲೇ ಮನೆ ಮಾಡಲಿ ಎಂದು ಮಾಜಿ ಶಾಸಕ ಪ್ರೀತಂ ಗೌಡ ಅವರ ತಾಯಿ ನಾಗರತ್ನಾ ಜವರೇಗೌಡ ಸಲಹೆ ನೀಡಿದರು.
ನಗರದ ಬೂವನಹಳ್ಳಿ ಕೂಡು ಬಳಿ ಇರುವ ಶ್ರೀ ರಂಗನಾಥಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾತೃಭೋಜನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮಾತೃ ಭೋಜನ ಅಮ್ಮ ಮತ್ತು ಮಗುವಿನ ನಡುವೆ ಬಾಂಧವ್ಯ ಹೆಚ್ಚಿಸುವಂತಹ ಹಾಗೂ ಮಗುವಿನ ಜೀವನದಲ್ಲಿ ತಂದೆ, ತಾಯಿಯ ಪಾತ್ರ ಎಷ್ಟು ಗಮನಾರ್ಹವಾಗಿರುತ್ತದೆ ಎಂದು ಈ ಕಾರ್ಯಕ್ರಮ ತೋರಿಸುತ್ತಿದೆ ಎಂದರು.
ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಅನ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಈ ಕಾಲದಲ್ಲಿ ನಮ್ಮ ಹಿಂದೂ ಧರ್ಮದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರು ಹೆಚ್ಚು ಪ್ರಮುಖ ಎಂಬುದನ್ನು ಈ ಕಾರ್ಯಕ್ರಮದ ಮೂಲಕ ತಿಳಿಸುವ ಕಾರ್ಯವನ್ನು ಈ ಶಾಲೆಯ ಎಲ್ಲ ಶಿಕ್ಷಕರು ಪಾಠದೊಡನೆ ಈ ಕಾರ್ಯಕ್ರಮದ ಮೂಲಕ ಮನಮುಟ್ಟುವಂತೆ ತಿಳಿಯಪಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ರಂಗಭೂಮಿ ಕಲಾವಿದೆ ಪೂಜಾ ರಘುನಂದನ್ ಮತ್ತು ರಾಷ್ಟ್ರಸೇವಾ ಸಮಿತಿಯ ಮಮತಾ ಮಂಜುನಾಥ್, ಸಂಸ್ಥೆಯ ಕಾರ್ಯದರ್ಶಿ ಬಿ.ವಿ.ಶ್ರೀನಿವಾಸ್, ಶಾಲಾ ಸಮಿತಿ ಸದಸ್ಯರು, ಮುಖ್ಯಶಿಕ್ಷಕರು ಇತರರಿದ್ದರು.