ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಹಕಾರ

ಹಾಸನ ನಗರದ ಮಸೀದಿ, ಈದ್ಗಾ ಮತ್ತು ದರ್ಗಾಗಳ ಅಭಿವೃದ್ಧಿಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಪೆನ್ಶನ್ ಮೊಹಲ್ಲಾ ಡಿಎಸ್‌ಎಂ ಹಾಲ್‌ನಲ್ಲಿ ಮುಸಲ್ಮಾನರು ಶಾಸಕ ಸ್ವರೂಪ ಪ್ರಕಾಶ್ ಅವರನ್ನು  ಸನ್ಮಾನಿಸಿ ಗೌರವಿಸಿದರು.
ಹಾಸನ ನಗರದ ಮಸೀದಿ, ಈದ್ಗಾ ಮತ್ತು ದರ್ಗಾಗಳ ಅಭಿವೃದ್ಧಿಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಪೆನ್ಶನ್ ಮೊಹಲ್ಲಾ ಡಿಎಸ್‌ಎಂ ಹಾಲ್‌ನಲ್ಲಿ ಮುಸಲ್ಮಾನರು ಶಾಸಕ ಸ್ವರೂಪ ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಹಕಾರ
  • ಶಾಸಕ ಸ್ವರೂಪ ಪ್ರಕಾಶ್‌ಗೆ ಸನ್ಮಾನ
ಹಾಸನ: ನಗರದ ಮಸೀದಿ, ಈದ್ಗಾ ಮತ್ತು ದರ್ಗಾಗಳ ಅಭಿವೃದ್ಧಿಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಪೆನ್ಶನ್ ಮೊಹಲ್ಲಾ ಡಿಎಸ್‌ಎಂ ಹಾಲ್‌ನಲ್ಲಿ ಮುಸಲ್ಮಾನರು ಶಾಸಕ ಸ್ವರೂಪ ಪ್ರಕಾಶ್ ಅವರನ್ನು ಮಂಗಳವಾರ ಸನ್ಮಾನಿಸಿ ಗೌರವಿಸಿದರು.
ಕಳೆದ ಹಲವು ವರ್ಷಗಳ ಬೇಡಿಕೆಯಾಗಿದ್ದ ದರ್ಗಾ ಮತ್ತು ಈದ್ಗಾಗಳ ಅಭಿವೃದ್ಧಿಗೆ ಸರ್ಕಾರದ ಜತೆ ಚರ್ಚಿಸಿ ಸುಮಾರು 90 ಲಕ್ಷ ರೂ. ಅನುದಾನ ತಂದು ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಸೀದಿಗಳು, ದರ್ಗಾ, ಈದ್ಗಾಗಳ ಅಭಿವೃದ್ಧಿ ಅನುದಾನ ನೀಡಿದ್ದಕ್ಕೆ ಶಾಸಕರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಸ್ವರೂಪ ಪ್ರಕಾಶ್ ಮಾತನಾಡಿ, ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಮಸೀದಿಗಳು, ಈದ್ಗಾ, ದರ್ಗಾಗಳಿವೆ. ಮುಸಲ್ಮಾನರ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರದ ಅನುದಾನದ ಜತೆಗೆ ಶಾಸಕರ ಅನುದಾನವನ್ನು ನೀಡಿ ಅವರ ಅಭಿವೃದ್ಧಿಗೆ ಕೆಲಸ ಮಾಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ತಂದು ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಇನ್ನಷ್ಟು ಹೊಸ ಅಭಿವೃದ್ಧಿ ಕಾಮಗಾರಿಗಳಿಗೆ ತನ್ನ ಕೈಲಾದಷ್ಟು ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಮುಸಲ್ಮಾನ ಸಮುದಾಯವನ್ನು ಮೇಲೆತ್ತುವ ನಿಟ್ಟಿನಲ್ಲಿ ಶ್ರಮವಹಿಸುವುದಾಗಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net