ಅಡುಗೆ ಅನಿಲ ಸಿಲಿಂಡರ್ ಸ್ಫೋಟ ನಾಲ್ವರಿಗೆ ಗಾಯ

ಅರಕಲಗೂಡು ತಾಲೂಕಿನ ಕೆ.ಅಬ್ಬೂರು ಗ್ರಾಮದಲ್ಲಿ ಸೋಮವಾರ ಅಡುಗೆ ಗ್ಯಾಸ್ ಸೋರಿಕೆಯಾಗಿ ವಾಸದ ಮನೆ ಬೆಂಕಿಗೆ ಆಹುತಿಯಾಗಿರುವುದು.
ಅರಕಲಗೂಡು ತಾಲೂಕಿನ ಕೆ.ಅಬ್ಬೂರು ಗ್ರಾಮದಲ್ಲಿ ಸೋಮವಾರ ಅಡುಗೆ ಗ್ಯಾಸ್ ಸೋರಿಕೆಯಾಗಿ ವಾಸದ ಮನೆ ಬೆಂಕಿಗೆ ಆಹುತಿಯಾಗಿರುವುದು.
Published on
ಅರಕಲಗೂಡು: ತಾಲೂಕಿನ ಕೆ.ಅಬ್ಬೂರು ಗ್ರಾಮದಲ್ಲಿ ಸೋಮವಾರ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ವಾಸದ ಮನೆ ಸುಟ್ಟು ಹೋಗಿದ್ದು ನಾಲ್ವರು ಗಾಯಗೊಂಡಿದ್ದಾರೆ.
ಗ್ರಾಮದ ಸುಂದರೇಶ್ ಎಂಬುವರ ಮನೆಯಲ್ಲಿ ಬೆಳಗ್ಗೆ ಅಡುಗೆ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಅವಘಡಕ್ಕೆ ಸಿಲುಕಿ ಸುಂದರೇಶ್ ಪತ್ನಿ ವಿಜಯಮ್ಮ, (65), ಪುತ್ರ ರವಿ (40), ಮೊಮ್ಮಕ್ಕಳಾದ ಪೂಜಿತಾ (12), ನಿಹಾನ್ (8) ಗಾಯಗೊಂಡಿದ್ದು ಕೊಣನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತಿ ಉರಿದು ಅಡುಗೆ ಮನೆಯಲ್ಲಿದ್ದ ದಿನಬಳಕೆ ವಸ್ತುಗಳಾದ ಪಾತ್ರೆಗಳು, ದಿನಸಿ ಪದಾರ್ಥಗಳು, ಅಡುಗೆ ಮನೆಯ ಚಾವಣಿಯ ಹೆಂಚುಗಳು ಹಾಳಾಗಿವೆ. ಅಡುಗೆ ಮನೆಯ ಪಕ್ಕದ ಕೊಠಡಿಯಲ್ಲಿದ್ದ ಪ್ರಿಡ್ಜ್, ಮಿಕ್ಸರ್, ಕಬ್ಬಿಣದ ಬೀರು, ಬೆಳೆ ಬಾಳುವ ಸೀರೆಗಳು ಸುಟ್ಟು ಹೋಗಿವೆ. ಸುಮಾರು 1500 ಹೆಂಚುಗಳು, ಪೀಠೋಪಕರಣಗಳು ಹಾಳಾಗಿವೆ. ವಿಷಯ ತಿಳಿದು ಅರಕಲಗೂಡು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮನೆ ಬೆಂಕಿಗೆ ಆಹುತಿಯಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net