ಸೇತುವೆ ನಿರ್ಮಾಣದಿಂದ ಜನರಿಗೆ ಅನುಕೂಲ

ಹಾರೋಸೋಮನಹಳ್ಳಿ ಕೆರೆ ಹಿಂಭಾಗದಲ್ಲಿ 3 ಕೋಟಿ ರೂ.ವೆಚ್ಚದ ನೂತನ ಸೇತುವೆಯನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಕುರುವಂಕ ಶಿವಸ್ವಾಮಿ, ಮಂಜುನಾಥ್, ಧರ್ಮರಾಜ್, ಮಧು, ಜೈ ಕುಮಾರ್, ಸಂಪತ್ ಕುಮಾರ್, ದೇವರಾಜ್, ಕುಮಾರ್ ಇದ್ದರು.
ಹಾರೋಸೋಮನಹಳ್ಳಿ ಕೆರೆ ಹಿಂಭಾಗದಲ್ಲಿ 3 ಕೋಟಿ ರೂ.ವೆಚ್ಚದ ನೂತನ ಸೇತುವೆಯನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಕುರುವಂಕ ಶಿವಸ್ವಾಮಿ, ಮಂಜುನಾಥ್, ಧರ್ಮರಾಜ್, ಮಧು, ಜೈ ಕುಮಾರ್, ಸಂಪತ್ ಕುಮಾರ್, ದೇವರಾಜ್, ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿಕೆ
  • ತೋಟಿ ನೀರಾವರಿ ಯೋಜನೆಗೆ ಭೂಮಿ ನೀಡಿರುವ ರೈತರಿಗೆ ಪರಿಹಾರಕ್ಕೆ ಮನವಿ
ನುಗ್ಗೇಹಳ್ಳಿ : ಹೋಬಳಿಯ ಹಾರೋ ಸೋಮನಹಳ್ಳಿ-ನಟೇಕೆರೆ ಗ್ರಾಮದ ಮಾರ್ಗ ಮಧ್ಯದಲ್ಲಿ ಸೇತುವೆ ನಿರ್ಮಾಣದಿಂದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಹಾರೋ ಸೋಮನಹಳ್ಳಿ ಗ್ರಾಮದ ಕೆರೆಯ ಹಿಂಭಾಗ 3 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಬೃಹತ್ ಸೇತುವೆ ಉದ್ಘಾಟನೆ ಮಾಡಿ ಮಾತನಾಡಿದರು.
ನುಗ್ಗೇಹಳ್ಳಿ, ಜಂಬೂರು, ತಾವರೆಕೆರೆ, ಚನ್ನನಕಟ್ಟೆ ಕೆರೆಗಳು ತುಂಬಿ ಕೋಡಿ ಬಿದ್ದ ನೀರು ಹಾರೋ ಸೋಮನಹಳ್ಳಿ ಕೆರೆಗೆ ಬರುತ್ತದೆ. ಇದರಿಂದ ಕೆರೆ ಕೋಡಿ ಮೇಲ್ಭಾಗದಲ್ಲಿ ಹೆಚ್ಚಿನ ನೀರು ಗ್ರಾಮದಿಂದ ನಟ್ಟೇಕೆರೆ ಗ್ರಾಮ ಸಂಪರ್ಕಿಸುವ ರಸ್ತೆ ಸಂಪೂರ್ಣ ಮುಳುಗಡೆ ಆಗುತ್ತಿತ್ತು. ಇದರಿಂದ ರೈತರಿಗೆ ಹಾಗೂ ವಾಹನ ಸವಾರರಿಗೆ ಮಳೆಗಾಲದಲ್ಲಿ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣ ಮಾಡಲಾಗಿದೆ ಎಂದರು.
ಹಾರೋ ಸೋಮನಹಳ್ಳಿ ಗ್ರಾಮದಿಂದ ಕಲ್ಕೆರೆ ಭಾಗದ ಸೊಪ್ಪಿನ ಹಳ್ಳಿ ಗ್ರಾಮದ ಬಳಿಯೂ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಭಾಗದ ಮುಖ್ಯ ರಸ್ತೆಗಳ ಅಭಿವೃದ್ಧಿ ಹಾಗೂ ಸಮುದಾಯ ಭವನ ದೇವಾಲಯಗಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಗಮನ ಹರಿಸಲಾಗಿದೆ. ತಾಲೂಕಿನಲ್ಲೇ ಅತಿ ಹೆಚ್ಚು ವಿಸ್ತೀರ್ಣವುಳ್ಳ ಸೇತುವೆ ಇದಾಗಿದೆ ಎಂದು ತಿಳಿಸಿದರು.
ತೋಟಿ ನೀರಾವರಿ ಯೋಜನೆಗೆ ಭೂಮಿ ನೀಡಿರುವ ರೈತರಿಗೆ ಪರಿಹಾರ ಒದಗಿಸುವಂತೆ ಕಳೆದ ಅಧಿವೇಶನದಲ್ಲಿ ನೀರಾವರಿ ಸಚಿವರಿಗೆ ಮನವಿ ಮಾಡಿದ್ದು, ಈ ಬಗ್ಗೆ ಸಚಿವರು ಗಮನಹರಿಸಿ ತಮ್ಮ ಮನವಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಯೋಜನೆ ಪೂರ್ಣಗೊಂಡರೆ ಈ ಭಾಗದ ಕೆರೆಗಳನ್ನು ತುಂಬಿಸಲು ಹೆಚ್ಚು ಸಹಕಾರಿಯಾಗಲಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎನ್.ಮಂಜುನಾಥ್, ಕುರುವಂಕ ಶಿವಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಧರ್ಮರಾಜ್, ಮಾಜಿ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಮುಖಂಡರಾದ ಟಿ.ಎನ್. ಮಧು, ಜಯಕುಮಾರ್, ದುಬೈ ದೇವರಾಜ್, ಕುಮಾರ್, ಜಯರಾಮ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net