ಗವೇನಹಳ್ಳಿ, ಬುಸ್ತೇನಹಳ್ಳಿ, ಕಸ್ತೂರವಳ್ಳಿ, ಆಡುವಳ್ಳಿ, ಬೊಮ್ಮನಾಯಕನಹಳ್ಳಿ, ರಾಜಘಟ್ಟ, ದೊಡ್ಡ ಹೊನ್ನೇನಹಳ್ಳಿ, ಕಾಚನಾಯಕನಹಳ್ಳಿ ಹಾಗೂ ದೊಡ್ಡಬಸವನಹಳ್ಳಿ ಗ್ರಾಮಸ್ಥರು ಸಲ್ಲಿಸಿದರು. ನಮಗೆ ಸೇರಿದ ವ್ಯವಸಾಯ ಜಮೀನನ್ನು ಕೆಐಎಡಿಬಿಯವರು 2007ನೇ ವರ್ಷದಲ್ಲಿ ಭೂ ಸ್ವಾಧೀನ ಮಾಡಿದ್ದಾರೆ. ಆದರೆ ಇದಕ್ಕೆ ಭೂ ಮಾಲೀಕರಿಗೆ ಯಾವುದೇ ಪರಿಹಾರ ನೀಡಿಲ್ಲ. ಜತೆಗೆ ಸದರಿ ಜಮೀನನ್ನು ಅಭಿವೃದ್ಧಿಪಡಿಸಿ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ಹಂಚಿಕೆ ಮಾಡಿಲ್ಲ. ಇದರ ವಿರುದ್ಧ ನಾವು ನ್ಯಾಯಾಲಯದ ಮೊರೆ ಹೋಗಿದ್ದು, ಭೂಮಿ ಹಂಚಿಕೆ ಮಾಡುವಂತೆ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದೇವೆ.