ಬೋರ್ವೆಲ್ ಬಿಟ್ ದರ ಹೆಚ್ಚಳಕ್ಕೆ ಖಂಡನೆ

ಬೋರ್ವೆಲ್ ಕೊರೆಯುವ ಬಿಟ್ ದರ ಹೆಚ್ಚಳ ಖಂಡಿಸಿ ಹಾಸನ ಜಿಲ್ಲಾ ಬೋರ್ವೆಲ್ ರಿಗ್ ಮಾಲೀಕರು ಹಾಗೂ ಏಜೆಂಟರ ಸಂಘದ ವತಿಯಿಂದ ನಗರದ ಡೈರಿ ವೃತ್ತದ ಬಳಿ ಇರುವ ಎಸ್.ಎಂ.ಕೆ ನಗರ ಲೇಔಟ್ ಬಳಿ ಲಾರಿಗಳನ್ನು ನಿಲ್ಲಿಸಿಕೊಂಡು ಪ್ರತಿಭಟನೆ ನಡೆಸಿದರು. ಸಂಘದ ಕಾರ್ಯದರ್ಶಿ ಪುನೀತ್, ಉಪಾಧ್ಯಕ್ಷ ಉಮೇಶ್, ಸಂಘದ ಪದಾಧಿಕಾರಿಗಳು ಇದ್ದರು.
ಬೋರ್ವೆಲ್ ಕೊರೆಯುವ ಬಿಟ್ ದರ ಹೆಚ್ಚಳ ಖಂಡಿಸಿ ಹಾಸನ ಜಿಲ್ಲಾ ಬೋರ್ವೆಲ್ ರಿಗ್ ಮಾಲೀಕರು ಹಾಗೂ ಏಜೆಂಟರ ಸಂಘದ ವತಿಯಿಂದ ನಗರದ ಡೈರಿ ವೃತ್ತದ ಬಳಿ ಇರುವ ಎಸ್.ಎಂ.ಕೆ ನಗರ ಲೇಔಟ್ ಬಳಿ ಲಾರಿಗಳನ್ನು ನಿಲ್ಲಿಸಿಕೊಂಡು ಪ್ರತಿಭಟನೆ ನಡೆಸಿದರು. ಸಂಘದ ಕಾರ್ಯದರ್ಶಿ ಪುನೀತ್, ಉಪಾಧ್ಯಕ್ಷ ಉಮೇಶ್, ಸಂಘದ ಪದಾಧಿಕಾರಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೋರ್ವೆಲ್ ಬಿಟ್ ದರ ಹೆಚ್ಚಳಕ್ಕೆ ಖಂಡನೆ
  • ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ
ಹಾಸನ: ಬೋರ್ವೆಲ್ ಕೊರೆಯುವ ಬಿಟ್ ದರ ಹೆಚ್ಚಳ ಖಂಡಿಸಿ ಹಾಸನ ಜಿಲ್ಲಾ ಬೋರ್ವೆಲ್ ರಿಗ್ ಮಾಲೀಕರು ಹಾಗೂ ಏಜೆಂಟರ ಸಂಘದ ವತಿಯಿಂದ ನಗರದ ಡೇರಿ ವೃತ್ತದ ಬಳಿ ಇರುವ ಎಸ್‌ಎಂಕೆ ನಗರ ಲೇಔಟ್ ಬಳಿ ಬುಧವಾರ ಲಾರಿಗಳನ್ನು ನಿಲ್ಲಿಸಿಕೊಂಡು ಪ್ರತಿಭಟನೆ ನಡೆಸಿದರು.
ಕಳೆದ ಎರಡು ದಿನಗಳಿಂದ ನಿರಂತರ ಪ್ರತಿಭಟನೆ ಹಮ್ಮಿಕೊಂಡಿರುವ ರಿಗ್ ಲಾರಿ ಮಾಲೀಕರು ಹಾಗೂ ಏಜೆಂಟರು ಬಿಟ್ ದರ ಹಾಗೂ ಹ್ಯಾಮರ್ ಬೆಲೆ ಹೆಚ್ಚಳದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಅಳಲು ತೋಡಿಕೊಂಡರು.
ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಜ.1ರಿಂದ ಬೋರ್ವೆಲ್ ಕೊರೆಯುವ ಲಾರಿಗಳ ಬಿಟ್ ದರ 26 ಸಾವಿರ ರೂ. ನಿಂದ ಏಕಾಏಕಿ 48 ಸಾವಿರ ರೂ. ಗೆ ಏರಿಕೆಯಾಗಿದ್ದು, ಇದರಿಂದ ರಿಗ್ ಲಾರಿ ಮಾಲೀಕರಿಗೆ ಆಘಾತ ಉಂಟಾಗಿದೆ ಎಂದರು.
ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ನೆಪದಲ್ಲಿ ಬಿಟ್ ಕಂಪನಿಗಳು ಬಿಟ್ ದರ ಏರಿಕೆ ಮಾಡಿದೆ. ಇದರಿಂದ ಬೋರ್ವೆಲ್ ಕೊರೆಯುವ ದರವು ಅನಿವಾರ್ಯವಾಗಿ ಹೆಚ್ಚಳವಾಗಲಿದೆ. ಇದರ ಪರಿಣಾಮ ರೈತರಿಗೂ ಹೊರೆ ಆಗಲಿದೆ. ಸರ್ಕಾರಗಳು ಮಧ್ಯಪ್ರವೇಶ ಮಾಡಿ ಬಿಟ್ ದರ ಕಡಿಮೆ ಮಾಡಿದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಖಜಾಂಚಿ ಶಿವಣ್ಣ ಮಾತನಾಡಿ, ಪ್ರತಿ ವರ್ಷ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುವುದು ಸಹಜ. ಆದರೆ ಬಿಟ್ ಮತ್ತು ಹ್ಯಾಮರ್ ದರ ಯಾರು ನಿರೀಕ್ಷಿಸಲಾಗದಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಇದರಿಂದ ರಿಗ್ ಲಾರಿ ಮಾಲೀಕರಿಗೂ ಸಮಸ್ಯೆಯಾಗುತ್ತದೆ. ರೈತರಿಗೂ ಸಮಸ್ಯೆಯಾಗುತ್ತದೆ ಎಂದರು.
ಸಂಘದ ಕಾರ್ಯದರ್ಶಿ ಪುನೀತ್, ಉಪಾಧ್ಯಕ್ಷ ಉಮೇಶ್, ಸಂಘದ ಪದಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net