ವನ್ಯ ಚೈತನ್ಯ ಕಾರ್ಯಕ್ರಮ ಸಮಾರೋಪ

ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಮಲ್ನಾಡ್ ಇಕೋ ಕ್ಲಬ್ ಎರಡು ದಿನಗಳ ಕಾಲ ಆಯೋಜಿಸಿದ್ದ ವನ್ಯ ಚೈತನ್ಯ 2025 ಕಾರ್ಯಕ್ರಮ ಕಾಲೇಜಿನ ಆಡಿಟೋರಿಯಂನಲ್ಲಿ ಸೋಮವಾರ ಮುಕ್ತಾಯಗೊಂಡಿತು.
ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಮಲ್ನಾಡ್ ಇಕೋ ಕ್ಲಬ್ ಎರಡು ದಿನಗಳ ಕಾಲ ಆಯೋಜಿಸಿದ್ದ ವನ್ಯ ಚೈತನ್ಯ 2025 ಕಾರ್ಯಕ್ರಮ ಕಾಲೇಜಿನ ಆಡಿಟೋರಿಯಂನಲ್ಲಿ ಸೋಮವಾರ ಮುಕ್ತಾಯಗೊಂಡಿತು.
Published on

ಪ್ರಮುಖ ಮುಖ್ಯಾಂಶಗಳು

  • ವನ್ಯ ಚೈತನ್ಯ ಕಾರ್ಯಕ್ರಮ ಸಮಾರೋಪ
  • ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ
  • 40 ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಾಸನ: ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಮಲ್ನಾಡ್ ಇಕೋ ಕ್ಲಬ್ ಎರಡು ದಿನಗಳ ಕಾಲ ಆಯೋಜಿಸಿದ್ದ ವನ್ಯ ಚೈತನ್ಯ 2025 ಕಾರ್ಯಕ್ರಮ ಕಾಲೇಜಿನ ಆಡಿಟೋರಿಯಂನಲ್ಲಿ ಸೋಮವಾರ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್, ವನ್ಯ ಚೈತನ್ಯ ಕಾರ್ಯಕ್ರಮ 2 ದಿನ ಯಶಸ್ವಿಯಾಗಿ ನಡೆದಿದೆ. ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಸಾಕಷ್ಟು ಅರಿವು ದೊರಕಿದೆ. ಚಿತ್ರಕಲೆ, ಪೋಸ್ಟರ್ ವಿನ್ಯಾಸ, ಪ್ರಕೃತಿಯ ಫೋಟೋಗ್ರಫಿ ಸೇರಿದಂತೆ ಹಲವು ಚಟುವಟಿಕೆ ಗಮನಸೆಳೆದಿವೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 40 ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಾಟಕ ಪ್ರದರ್ಶನ, ಪರಿಸರ ನೀತಿಯ ವಿಚಾರ ಸಂಕಿರಣ, ಸಾಮಾಜಿಕ ಸಂದೇಶ ಸಾರುವ ಕಿರು ನಾಟಕಗಳು, ಭಾಷಣ ಸ್ಪರ್ಧೆ, ಒಂದು ಪರಿಸರ ವಿಷಯದಲ್ಲಿ ತಕ್ಷಣ ಭಾಷಣ, ಪರಿಸರ ಸ್ನೇಹಿ ಆವಿಷ್ಕಾರಗಳು ಮತ್ತು ವಿಜ್ಞಾನ ಆಧಾರಿತ ಪ್ರಾಜೆಕ್ಟ್‌ಗಳ ಪ್ರದರ್ಶನ, ಕಸದ ವಸ್ತುಗಳಿಂದ ಉಪಯುಕ್ತ ಮತ್ತು ದೃಶ್ಯಾತ್ಮಕ ಕೃತಿಗಳನ್ನು ತಯಾರಿಸುವ ಕ್ರಿಯಾತ್ಮಕ ಸ್ಪರ್ಧೆ, ಪರಿಸರ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಕುರಿತ ಜ್ಞಾನ ಪರೀಕ್ಷೆ ಹಾಗೂ ಪರಿಸರ ಚಿಂತನೆ, ಪರಿಸರ ಸಂರಕ್ಷಣೆ ಮತ್ತು ಜವಾಬ್ದಾರಿ ವಿಷಯಗಳ ಕುರಿತು ಬರಹ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಪ್ರಭಾರ ಪ್ರಾಂಶುಪಾಲ ಡಾ.ಎಚ್.ಎಸ್. ನರಸಿಂಹನ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಹ ಅಧಿಕಾರಿ ಡಾ.ಶಿವಶಂಕರ, ಕಾರ್ಯಕ್ರಮ ಸಂಯೋಜಕ ಡಾ.ಡಿ.ವಿ.ಪ್ರದೀಪ್, ಡಿ.ವಿ.ಶ್ರುತಿ, ಪ್ರಾಧ್ಯಾಪಕ ರಮೇಶ್, ಮಾಧ್ಯಮ ಸಂಯೋಜಕ ಕಟ್ಟಾಯ ಶಿವಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net