ಚಾಮರಾಜನಗರ ಜಿಲ್ಲೆಯ ಬಳಿಕ ಹಾಸನದಲ್ಲಿ ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ನಗರ ಪ್ರದೇಶಗಳಿಂದ ದೂರವಿರುವ, ಮೊಬೈಲ್ ಮತ್ತಿತರ ಸಾಧನ ಸಂಪರ್ಕಗಳ ಸೌಲಭ್ಯವಿಲ್ಲದ ಮಕ್ಕಳು ತಮ್ಮ ಸಮಸ್ಯೆ ಹೇಳಿಕೊಳ್ಳಲು ಪರದಾಡುತ್ತಿದ್ದಾರೆ. ಬಾಲ್ಯ ವಿವಾಹ, ಪೋಕ್ಸೊ, ದೌರ್ಜನ್ಯ, ಕೌಟುಂಬಿಕ ಕಲಹ ಹೀಗೆ ನಾನಾ ಸಮಸ್ಯೆಗಳಿಂದ ವ್ಯಾಸಂಗದತ್ತ ಆಸಕ್ತಿ ತೋರಿಸಲು ಸಾಧ್ಯವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳು ದೂರು ಪೆಟ್ಟಿಗೆಯಲ್ಲಿ ಬರೆದು ಹಾಕಿದರೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿದೆ.