ಪುರಸಭೆ ಮಾಜಿ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಮಹಾನ್ ನಾಯಕರ ಪ್ರತಿಮೆಗಳಿಗೆ ಗೌರವ ಕೊಡುವುದೆಂದರೆ ಕೇವಲ ಹೂವಿನ ಹಾರ ಹಾಕುವುದಲ್ಲ. ಸ್ವಚ್ಛತೆಯನ್ನೂ ಕಾಪಾಡಬೇಕು. ಹೂವಿನ ಹಾರ ಹಾಕಬೇಕಾದರೆ ಇದ್ದಂತಹ ಗೌರವ ಅದೇ ಹಾರ ಒಣಗಿ ಬಾಡಿ ಪ್ರತಿಮೆಯ ಮೇಲೆ ಕೆಟ್ಟದಾಗಿ ಕಾಣುವಾಗ ಅದನ್ನು ತೆಗೆಯಬೇಕು ಎನ್ನುವ ಮನಸ್ಥಿತಿ ಇರಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ಗಮನಸೆಳೆದ ಹಿನ್ನೆಲೆಯಲ್ಲಿ ಪ್ರತಿಮೆಗಳು ಸ್ವಚ್ಛವಾಗಿ ಕಾಣಬೇಕು. ಈ ವಿಚಾರವಾಗಿ ಪುರಸಭೆ ಅಧಿಕಾರಿಗಳಿಗೂ ತಿಳಿಸಿದರೂ ಗಮನ ಹರಿಸದ ಕಾರಣ ಸ್ನೇಹಿತರು ಸೇರಿ ಸ್ವಚ್ಛತೆ ಕೈಗೊಂಡಿದ್ದೇವೆ. ಇನ್ನು ಮುಂದೆ ಯಾವ ಪ್ರತಿಮೆಯ ಮೇಲೆ ಹಾರ ಒಣಗಿರುತ್ತದೋ ಅದನ್ನು ತೆರವು ಮಾಡುವ ಕೆಲಸ ಮಾಡುತ್ತೇವೆ ಎಂದರು.