ವ್ಯವಹಾರಿಕ ಜ್ಞಾನ ವೃದ್ಧಿಗೆ ಮಕ್ಕಳ ಸಂತೆ ಸಹಕಾರಿ

 ಹೊಳೆನರಸೀಪುರ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾ ಮಕ್ಕಳ ಆಹಾರಮೇಳ ಹಾಗೂ ಮಕ್ಕಳ ಸಂತೆ ನಡೆಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ,  ಪ್ರಾಣೇಶ್, ಪುರುಷೋತ್ತಮ್, ಎಸ್‌ಡಿಎಂಸಿ ಅಧ್ಯಕ್ಷೆ  ಗಾಯತ್ರಿ ಇತರರು ಇದ್ದರು.
ಹೊಳೆನರಸೀಪುರ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾ ಮಕ್ಕಳ ಆಹಾರಮೇಳ ಹಾಗೂ ಮಕ್ಕಳ ಸಂತೆ ನಡೆಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಪ್ರಾಣೇಶ್, ಪುರುಷೋತ್ತಮ್, ಎಸ್‌ಡಿಎಂಸಿ ಅಧ್ಯಕ್ಷೆ ಗಾಯತ್ರಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಅಭಿಪ್ರಾಯ
ಹೊಳೆನರಸೀಪುರ: ಜೀವನದ ನಿತ್ಯ ಸತ್ಯಗಳನ್ನು ಅರಿತುಕೊಳ್ಳಲು ವಿದ್ಯಾರ್ಥಿಗಳಿಗೆ ಆಹಾರ ಮೇಳ ಹಾಗೂ ಮಕ್ಕಳ ಸಂತೆ ಅನುಕೂಲವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವತಿಯಿಂದ ಸೋಮವಾರ ಶಾಲಾವರಣದಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ಆಹಾರ ಮೇಳ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಲಾಭ ನಷ್ಟ, ತಿಳಿವಳಿಕೆ, ಧೈರ್ಯ ಬೆಳೆಸುವುದರ ಜತೆಗೆ ವ್ಯವಹಾರಿಕ ಜ್ಞಾನ ವೃದ್ಧಿಗೊಳ್ಳಲಿದೆ. ಶಿಕ್ಷಣದ ಜತೆಗೆ ಈ ವಿಷಯಗಳನ್ನು ಅರಿತುಕೊಳ್ಳುವುದರಿಂದ ಬದುಕಿನಲ್ಲಿ ಸಹಾಯಕವಾಗಲಿದೆ. ವಿವಿಧ ಚಟುವಟಿಕೆಗಳ ಮೂಲಕ ಗಣಿತದ ಕಲಿಕೆಯನ್ನು ಅಭ್ಯಾಸ ಮಾಡುವಂತೆ ವಿವಿಧ ವಿಷಯಗಳನ್ನು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಜ್ಞಾನಾಭಿವೃದ್ಧಿ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ದಿನನಿತ್ಯ ಶಾಲಾ ಕೊಠಡಿಯೊಳಗೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮಕ್ಕಳ ಸಂತೆ ಹಾಗೂ ಆಹಾರ ಮೇಳಗಳಲ್ಲಿ ಚಟುವಟಿಕೆಯಿಂದ ತೊಡಗಿಸಿಕೊಳ್ಳುವ ಜತೆಗೆ ಸಂತಸ ತಂದುಕೊಡಲಿದೆ. ಈ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ಸ್ಫೂರ್ತಿದಾಯಕವಾಗಿ ಹೊರಹೊಮ್ಮಲಿದ್ದಾರೆ ಎಂದು ಹೇಳಿದರು. ಶತಮಾನೋತ್ಸವ ಆಚರಿಸುತ್ತಿರುವ ಈ ಶಾಲೆ ದಾಖಲಾತಿ ದ್ವಿಗುಣಗೊಳ್ಳಲು ಪಾಲಕರು ಹೆಚ್ಚಿನ ನೆರವು ನೀಡಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್, ಉಪ ಪ್ರಾಂಶುಪಾಲ ಪುರುಷೋತ್ತಮ್, ಎಸ್‌ಡಿಎಂಸಿ ಅಧ್ಯಕ್ಷೆ ಗಾಯತ್ರಿ ಮಾತನಾಡಿದರು.
ಆಹಾರಮೇಳ ಹಾಗೂ ಮಕ್ಕಳ ಸಂತೆಯಲ್ಲಿ ವಿವಿಧ ತರಕಾರಿ ಸೊಪ್ಪುಗಳು, ಹಣ್ಣುಗಳು, ತಿಂಡಿ-ತಿನಿಸುಗಳು ಶಾಲಾವರಣದಲ್ಲಿ ಆಕರ್ಷಣೆ ಆಗಿದ್ದವು. ಕಾರ್ಯಕ್ರಮದಲ್ಲಿ ಇಸಿಒ ಕೇಶವ, ಶಿಕ್ಷಕಿಯರಾದ ನಾಗವೇಣಿ, ಬೇಬಿ ರಾಣಿ, ಆಶಾ, ಸುಮರಾಣಿ, ಶಿಕ್ಷಕ ಕಾಂತಾರಾಜು, ಪಾಲಕರು ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net