ತಾಲೂಕು ಆಸ್ಪತ್ರೆಯಲ್ಲಿ ಔಷಧ ದಾಸ್ತಾನು ಪರಿಶೀಲನೆ

ಆಲೂರು ತಾಲೂಕು ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ದಿಢೀರ್ ಭೇಟಿ ನೀಡಿ, ಔಷಧ ದಾಸ್ತಾನು ಪರಿಶೀಲಿಸಿದರು. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕಿಶೋರ್ ಇದ್ದರು.
ಆಲೂರು ತಾಲೂಕು ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ದಿಢೀರ್ ಭೇಟಿ ನೀಡಿ, ಔಷಧ ದಾಸ್ತಾನು ಪರಿಶೀಲಿಸಿದರು. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕಿಶೋರ್ ಇದ್ದರು.
Published on
ಆಲೂರು: ತಾಲೂಕು ಆಸ್ಪತ್ರೆಯಲ್ಲಿ ಔಷಧ ದಾಸ್ತಾನು ಇದೆ. ರೋಗಿಗಳು ಆತಂಕಕ್ಕೊಳಗಾಗಬಾರದು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಪಟ್ಟಣದ ತಾಲೂಕು ಆಸ್ಪತ್ರೆಗೆ ಭಾನುವಾರ ರಾತ್ರಿ ದಿಢೀರ್ ಭೇಟಿ ನೀಡಿ, ಔಷಧ ದಾಸ್ತಾನು ಪರಿಶೀಲಿಸಿ ಮಾತನಾಡಿದರು. ದಾಸ್ತಾನು ಕೊಠಡಿಯಲ್ಲಿ ನಿತ್ಯ ಬೇಕಾಗುವ ಶೇ.75ಕ್ಕೂ ಹೆಚ್ಚು ಪ್ರಮಾಣದಲ್ಲಿ ಔಷಧ ಇದೆ. ಸಾರ್ವಜನಿಕರ ಗಮನಕ್ಕಾಗಿ ಔಷಧ ದಾಸ್ತಾನು ಪಟ್ಟಿಯನ್ನು ಆಸ್ಪತ್ರೆಯಲ್ಲಿ ಪ್ರದರ್ಶನ ಮಾಡಲಾಗಿದೆ. ಸಾರ್ವಜನಿಕರು ಇದನ್ನು ಗಮನಿಸಬಹುದು ಎಂದ ಅವರು. ಒಂದು ದಿನಕ್ಕೆ ಬೇಕಾಗುವ ಔಷಧಿಯನ್ನು ದಾಸ್ತಾನು ಕೊಠಡಿಯಿಂದ ಹೊರ ತಂದು ಇಟ್ಟುಕೊಳ್ಳುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಔಷಧ ಕೊರತೆ ಇಲ್ಲ ಎಂದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳರೋಗಿಗಳ ಆರೈಕೆ ಬಗ್ಗೆ ಪರಿಶೀಲನೆ ನಡೆಸಿದರು.
ಡಾ.ಆಲೂರು ಆಡಳಿತ ವೈದ್ಯಾಧಿಕಾರಿ ಕಿಶೋರ್, ಈವರೆಗೆ ತಾಲೂಕು ಆಸ್ಪತ್ರೆಯಲ್ಲಿ ಔಷಧ ಕೊರತೆ ಇಲ್ಲ. ಕೆಲ ಔಷಧಗಳ ಕೊರತೆ ಇರಬಹುದು. ಆದರೆ ದಿನ ನಿತ್ಯದ ಉಪಯೋಗಕ್ಕೆ ಸಾಕಷ್ಟು ಔಷಧ ದಾಸ್ತಾನು ಇದೆ. ಇತ್ತೀಚೆಗೆ ಜೆಎಂಎಫ್ ನ್ಯಾಯಾಧೀಶರು ಸಹ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ಮಾಡಿ ಔಷಧ ವಿವರ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net