ಸುಟ್ಟು ಕರಕಲಾದ ಬಟ್ಟೆ ಅಂಗಡಿ

ಬೇಲೂರು ಪಟ್ಟಣದ ಹೊಳೆ ಬೀದಿಯ ಬಟ್ಟೆ ಅಂಗಡಿಯಲ್ಲಿದ್ದ ಪೀಠೋಪಕರಣಗಳು, ಬಟ್ಟೆ ಸುಟ್ಟು ಕರಕಲಾಗಿರುವುದು.
ಬೇಲೂರು ಪಟ್ಟಣದ ಹೊಳೆ ಬೀದಿಯ ಬಟ್ಟೆ ಅಂಗಡಿಯಲ್ಲಿದ್ದ ಪೀಠೋಪಕರಣಗಳು, ಬಟ್ಟೆ ಸುಟ್ಟು ಕರಕಲಾಗಿರುವುದು.
Published on
ಬೇಲೂರು: ಪಟ್ಟಣದ ಹೊಳೆ ಬೀದಿಯ ಬಟ್ಟೆ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಬಟ್ಟೆ ಸೇರಿದಂತೆ ಪೀಠೋಪಕರಣಗಳು ಸಂಪುರ್ಣ ಸುಟ್ಟು ಕರಕಲಾಗಿವೆ.
ಪಟ್ಟಣದ ಹೊಳೆ ಬೀದಿ ನಿವಾಸಿ ಸಂತೋಷ್ ಎಂಬುವವರಿಗೆ ಸೇರಿದ ಬಟ್ಟೆ ಅಂಗಡಿಯಲ್ಲಿ ಶನಿವಾರ ರಾತ್ರಿ ದುರ್ಘಟನೆ ನಡೆದಿದೆ. ಮಾಲೀಕ ಸಂತೋಷ್ ಮನೆಗೆ ಹಾಲು ತರಲೆಂದು ರಾತ್ರಿ ಅಂಗಡಿಯ ಶಟರ್ ಎಳೆದು ಹೊರ ಹೋಗಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಅಂಗಡಿಯೊಳಗಿನಿಂದ ಬೆಂಕಿ ಹಾಗೂ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು.
ಮಾಲೀಕ ಸಂತೋಷ್‌ಗೆ ತಿಳಿಸಿ ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರೊಳಗೆ ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ಬಟ್ಟೆಗಳು ಹಾಗೂ ಪೀಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು.
ಸ್ಥಳಕ್ಕೆ ಬೇಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net