ಜನಪರ ಆಡಳಿತ ನೀಡಲು ಸರ್ಕಾರಗಳು ವಿಫಲ

ಆರ್ಥಿಕ ಸಹಯೋಗ ದಿವಸ್ ಆಂದೋಲನದ ಅಂಗವಾಗಿ ಬಿಎಸ್ಪಿ ಪದಾಧಿಕಾರಿಗಳು ಬಿಕ್ಕೋಡು ಸಮೀಪದ ಗ್ರಾಮವೊಂದರಲ್ಲಿ ಪಕ್ಷ ಸಂಘಟನೆಗಾಗಿ ಆರ್ಥಿಕ ಸಹಕಾರ ನೀಡುತ್ತಿರುವುದು.
ಆರ್ಥಿಕ ಸಹಯೋಗ ದಿವಸ್ ಆಂದೋಲನದ ಅಂಗವಾಗಿ ಬಿಎಸ್ಪಿ ಪದಾಧಿಕಾರಿಗಳು ಬಿಕ್ಕೋಡು ಸಮೀಪದ ಗ್ರಾಮವೊಂದರಲ್ಲಿ ಪಕ್ಷ ಸಂಘಟನೆಗಾಗಿ ಆರ್ಥಿಕ ಸಹಕಾರ ನೀಡುತ್ತಿರುವುದು.
Published on
ಬೇಲೂರು: ಸರ್ಕಾರಗಳು ಜನಪರ ಆಡಳಿತ ನೀಡಲು ಸಾಧ್ಯವಾಗದೆ, ಚುನಾಯಿತ ಪ್ರತಿನಿಧಿಗಳು ಹಣ ಸಂಪಾದಿಸುವ ವ್ಯಾಪಾರಿಗಳಾಗಿದ್ದಾರೆ ಎಂದು ಬಿಎಸ್ಪಿ ರಾಜ್ಯ ಸಂಯೋಜಕ ಗಂಗಾಧರ್ ಬಹುಜನ್ ಆರೋಪಿಸಿದರು.
ತಾಲೂಕಿನ ಬಿಕ್ಕೋಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬಿಎಸ್ಪಿಯಿಂದ ಆಯೋಜಿಸಿದ್ದ ಆರ್ಥಿಕ ಸಹಯೋಗ ದಿವಸ್ ಆಂದೋಲನದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಮನುವಾದಿ ಪಕ್ಷಗಳು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಕೇವಲ ಅಧಿಕಾರಕ್ಕಾಗಿ ಅಪಾರ ಪ್ರಮಾಣದ ಹಣ ವ್ಯಯ ಮಾಡಿ ಚುನಾವಣೆಗಳಲ್ಲಿ ಗೆಲ್ಲುವುದರಿಂದ ಜನರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷಿಸುತ್ತಿವೆ ಎಂದರು.
ರೈತರು, ಮಹಿಳೆಯರು, ಯುವಕರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಬದುಕು ಮುರಾ ಬಟ್ಟೆಯಾಗಿದೆ. ಆದರೆ ಬಿಎಸ್ಪಿ ತನ್ನ ಚುನಾವಣೆ ಖರ್ಚನ್ನು ಬಂಡವಾಳ ಶಾಹಿಗಳಿಂದ ಪಡೆಯದೆ ಜನರಿಂದಲೇ ಆರ್ಥಿಕ ಸಹಯೋಗ ಆಂದೋಲನ ಮೂಲಕ ಸಂಗ್ರಹಿಸಿ ಆಡಳಿತ ನಡೆಸುವ ಮಹತ್ತರ ಉದ್ದೇಶ ಹೊಂದಿರುವ ಏಕೈಕ ಪಕ್ಷವಾಗಿದೆ ಎಂದರು.
ಕರ್ನಾಟಕ ಬಿಎಸ್ಪಿ ಉಸ್ತುವಾರಿ ದೆಹಲಿಯ ದಿನೇಶ್ ಗೌತಮ್ ಮಾತನಾಡಿ, ಅಂಬೇಡ್ಕರ್ ಮತ್ತು ಕಾನ್ಷಿರಾಂ ಅವರ ಕನಸನ್ನು ನನಸು ಮಾಡುವುದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲೇ ಕರ್ನಾಕಟದಲ್ಲೂ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಜಿಲ್ಲಾ ಕಾರ್ಯದರ್ಶಿ ರಾಜು ಬೆಳ್ಳೊಟ್ಟೆ, ಜಿಲ್ಲಾ ಕಚೇರಿ ಕಾರ್ಯದರ್ಶಿ ಕಿರಣ್ ಕುಮಾರ್, ಬಿವಿಫ್ ಸಂಯೋಜಕ ಹೇಮಂತ್, ಹೊಳೆನರಸೀಪುರ ತಾಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್, ವಕೀಲ ರಾಜೇಶ್, ತಾಲೂಕು ಸಂಯೋಜಕ ಉಮೇಶ್, ತಾಲೂಕು ಅಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷ ನಿಂಗರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net