ವಸತಿ ರಹಿತ ಕರಿಯಮ್ಮಗೆ ವಾತ್ಸಲ್ಯ ಮನೆ ಹಸ್ತಾಂತರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಕರಿಯಮ್ಮ ಅವರಿಗೆ ವಾತ್ಸಲ್ಯ ಯೋಜನೆಯಡಿ ಮನೆ ಹಸ್ತಾಂತರ ಮಾಡಲಾಯಿತು. ಶ್ರೀರುದ್ರಮುನಿ ಸ್ವಾಮೀಜಿ, ಸೋಮನಾಥ್, ಕಲಾಶ್ರೀ, ನಾಗೇಶ್ ಮತ್ತಿತರರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಕರಿಯಮ್ಮ ಅವರಿಗೆ ವಾತ್ಸಲ್ಯ ಯೋಜನೆಯಡಿ ಮನೆ ಹಸ್ತಾಂತರ ಮಾಡಲಾಯಿತು. ಶ್ರೀರುದ್ರಮುನಿ ಸ್ವಾಮೀಜಿ, ಸೋಮನಾಥ್, ಕಲಾಶ್ರೀ, ನಾಗೇಶ್ ಮತ್ತಿತರರಿದ್ದರು.
Published on
ಅರಸೀಕೆರೆ ಗ್ರಾಮಾಂತರ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದ್ದು, ಇದು ಗ್ರಾಮೀಣ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡುತ್ತದೆ. ಮಹಿಳೆಯರು ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಉದ್ಯೋಗ ಸೃಷ್ಟಿಯಂತಹ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಬುಧವಾರ ಮಾಡಾಳಿನ ವಿರುದ್ಧ ಮಠದ ಶ್ರೀರುದ್ರಮುನಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಕಣಕಟ್ಟೆ ಹೋಬಳಿ ಕೆ.ಶಂಕರನಹಳ್ಳಿ ಗ್ರಾಮ ಪಂಚಾಯಿತಿಯ ಬೆಂಡಿಗೊಂಡಿಹಳ್ಳಿ ಗ್ರಾಮದ ಬಡ ಕುಟುಂಬದ ಕರಿಯಮ್ಮ ಎಂಬ ವೃದ್ಧೆಗೆ ವಾತ್ಸಲ್ಯ ಯೋಜನೆಯಲ್ಲಿ ಮನೆ ನಿರ್ಮಿಸಿ ಅವರಿಗೆ ಹಸ್ತಾಂತರ ಮಾಡಿ ಮಾತನಾಡಿದರು.
ಹಾಸನ ಜಿಲ್ಲೆಯ ನಿರ್ದೇಶಕ ಮಹಾಬಲ ಕುಲಾಲು ಮಾತನಾಡಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯು ಅದರಲ್ಲೂ ಸೂರು ಇಲ್ಲದವರಿಗೆ ಆಸರೆಯಾದ ಧರ್ಮಸ್ಥಳ ಗ್ರಾಮಿಣ ವಾತ್ಸಲ್ಯ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಇಲ್ಲಿಯವರೆಗೆ 850 ಒಂಟಿ ಜೀವನ ನಡೆಸುವ ನಿರ್ಗತಿಕರಿಗೆ ಮನೆ ನೀಡಲಾಗಿದೆ. ಇದು ಮಾತೃಶ್ರೀ ಹೇಮಾವತಿ ಅಮ್ಮ ಅವರ ಆಸೆಯಾಗಿತ್ತು. ಈ ಯೋಜನೆಯ ಫಲಾನುಭವಿ ಕರಿಯಮ್ಮ ಅವರಿಗೆ ಮನೆ ಹಸ್ತಾಂತರ ಮಾಡಿದ್ದು ಸಂತಸ ತಂದಿದೆ ಎಂದರು.
ಬಾಣವಾರ ಯೋಜನಾಧಿಕಾರಿ ಸೋಮನಾಥ್, ವಲಯ ಮೇಲ್ವಿಚಾರಕಿ ಪಿ.ಕಲಾಶ್ರೀ, ಸೇವಾ ಪ್ರತಿನಿಧಿ ನಾಗೇಶ್ ಹಾಗೂ ವಲಯ ಅಧ್ಯಕ್ಷರು, ಪಂಚಾಯಿತಿ ಅಧ್ಯಕ್ಷರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net