ವಿಶ್ವದ ಪ್ರಮುಖ ಸೇವಾ ಸಂಸ್ಥೆ ಲಯನ್ಸ್

ಲಯನ್ಸ್ ಸಂಸ್ಥೆಯಿಂದ ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಲಯನ್ಸ್ ಸಂಸ್ಥೆ ಮಾಜಿ ಪ್ರಾಂತಪಾಲ ಸಂಜೀತ್‌ಶೆಟ್ಟಿ ಉದ್ಘಾಟಿಸಿದರು.ರಾಬೀನ್ ಸೋಮಯ್ಯ, ದಿನೇಶ್, ರಘು ಪಾಳ್ಯ,ದೊಡ್ಡಮನೆ ಪ್ರಭಾಕರ್ ಮತ್ತಿತರರಿದ್ದರು.
ಲಯನ್ಸ್ ಸಂಸ್ಥೆಯಿಂದ ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಲಯನ್ಸ್ ಸಂಸ್ಥೆ ಮಾಜಿ ಪ್ರಾಂತಪಾಲ ಸಂಜೀತ್‌ಶೆಟ್ಟಿ ಉದ್ಘಾಟಿಸಿದರು.ರಾಬೀನ್ ಸೋಮಯ್ಯ, ದಿನೇಶ್, ರಘು ಪಾಳ್ಯ,ದೊಡ್ಡಮನೆ ಪ್ರಭಾಕರ್ ಮತ್ತಿತರರಿದ್ದರು.
Published on
ಬೇಲೂರು: ಲಯನ್ಸ್ ಸಂಸ್ಥೆ ಯಾವುದೇ ಜಾತಿ, ಧರ್ಮ, ವರ್ಗಕ್ಕೆ ಸೀಮಿತವಾಗದೆ ಮಾನವೀಯ ಮೌಲ್ಯ ಆಧಾರವಾಗಿಟ್ಟುಕೊಂಡು ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದೆ ಎಂದು ಲಯನ್ಸ್ ಸಂಸ್ಥೆ ಮಾಜಿ ಪ್ರಾಂತಪಾಲ ಸಂಜೀತ್‌ಶೆಟ್ಟಿ ತಿಳಿಸಿದರು.
ಲಯನ್ಸ್ ಸಂಸ್ಥೆಯಿಂದ ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದ ಎಲ್ಲ ವರ್ಗಗಳ ಜನರಿಗೆ ಸಂದರ್ಭಕ್ಕನುಸಾರವಾಗಿ ನೆರವಾಗುವ ಮೂಲಕ ಲಯನ್ಸ್ ಸಂಸ್ಥೆ ಜನ ಸಾಮಾನ್ಯರಲ್ಲಿ ವಿಶ್ವಾಸ ಗಳಿಸಿದೆ. ಬಡವರು, ನಿರ್ಗತಿಕರು, ವಂಚಿತರಿಗೆ ಆಹಾರ ಮತ್ತು ಅಗತ್ಯ ವಸ್ತುಗಳ ವಿತರಣೆ, ಆರೋಗ್ಯ ಉಚಿತ ತಪಾಸಣೆ, ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣೆ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಪರಿಸರ ಸಂರಕ್ಷಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಸೇರಿದಂತೆ ಹಲವಾರು ಸಮಾಜಮುಖಿ ಸೇವಾ ಚಟುವಟಿಕೆಯನ್ನು ನಿರಂತರವಾಗಿ ನಡೆಸುತ್ತಿರುವುದನ್ನು ಶ್ಲಾಸಿದರು.
ಸಮಾಜದ ಬೆಳವಣಿಗೆಗಾಗಿ ಪ್ರತಿಯೊಬ್ಬ ನಾಗರಿಕರೂ ಕೈಲಾದ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿ ಕೊಳ್ಳಬೇಕು ಎಂದರು.
ಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷ ಮುಕ್ತಿಯಾರ್ ಅಹಮದ್ ಮಾತನಾಡಿ, ಲಯನ್ಸ್ ಸಂಸ್ಥೆ ಸೇವೆಯನ್ನೇ ಪರಮೋದ್ದೇಶವಾಗಿಸಿಕೊಂಡ ಸಂಸ್ಥೆಯಾಗಿದೆ. ಆರೋಗ್ಯ, ಶಿಕ್ಷಣ, ಪರಿಸರ ಸೇರಿದಂತೆ ಗ್ರಾಮೀಣ ಭಾಗಕ್ಕೂ ಸೇವಾ ಚಟುವಟಿಕೆಯನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಲಯನ್ಸ್ ಭವನದಲ್ಲಿ ಶಾಶ್ವತ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಪ್ರಾಮಾಣಿಕತೆ, ನಿಸ್ವಾರ್ಥತೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿ ಬಡವರು, ದೀನ ದುರ್ಬಲರು ಹಾಗೂ ಅಂಗವಿಕಲರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ನಿಕಟಪೂರ್ವ ಲಯನ್ಸ್ ಸಂಸ್ಥೆ ಅಧ್ಯಕ್ಷೆ ತಾರಾಮಣಿ ಸುರೇಶ್ ಮಾತನಾಡಿ, ಕಳೆದ ವರ್ಷದ ಅವಧಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಮಹತ್ವದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ಉತ್ತಮ ಸ್ಪಂದನೆ ಸಿಕ್ಕಿದೆ. ನೂತನ ಪದಾಧಿಕಾರಿಗಳು ಇನ್ನಷ್ಟು ಜನಪರ ಸೇವಾ ಕಾರ್ಯಕ್ರಮ ರೂಪಿಸಿ ಸಂಸ್ಥೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಲಿ ಎಂದರು.
ಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷರಾಗಿ ಮುಕ್ತಿಯಾರ್ ಅಹಮದ್, ಕಾರ್ಯದರ್ಶಿಯಾಗಿ ಎಂ.ಪಿ.ಪೂವಯ್ಯ, ಖಜಾಂಚಿಯಾಗಿ ಸಂತೋಷ್ ಅಧಿಕಾರ ಸ್ವೀಕರಿಸಿದರು. ಲಿಯೋ ಕ್ಲಬ್‌ನ ಅಧ್ಯಕ್ಷರಾಗಿ ಉಮೇಮಾ ಸಫಿಯಾ, ಕಾರ್ಯದರ್ಶಿಯಾಗಿ ದಿಯಾ ಜೈನ್ ಹಾಗೂ ಖಜಾಂಚಿಯಾಗಿ ಕುಸ್ವಿ ಪೂವಯ್ಯ ಪದಗ್ರಹಣ ಮಾಡಿದರು.
ಲಯನ್ಸ್ ಸಂಸ್ಥೆ ಪ್ರಾಂತ್ಯಿಯ ರಾಯಭಾರಿ ರಾಬೀನ್ ಸೋಮಯ್ಯ, ವಲಯಾಧ್ಯಕ್ಷ ದಿನೇಶ್, ಪ್ರಾಂತೀಯ ಅಧ್ಯಕ್ಷ ರಘು ಪಾಳ್ಯ, ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್, ಸಂಸ್ಥೆಯ ಡಾ.ಚಂದ್ರಮೌಳಿ, ಅಬ್ದುಲ್ ಲತೀಪ್, ಆದರ್ಶ, ಮಂಜುನಾಥ್, ಪ್ರಶಾಂತ್, ರವಿಕುಮಾರ್, ಪುಟ್ಟಸ್ವಾಮಿ, ಹೆಬ್ಬಾಳು ಹಾಲಪ್ಪ, ಹೇಮಂತ್, ಕೆ.ಎಲ್.ಸುರೇಶ್, ಬಿ.ವೈ.ಸುರೇಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net