

ಬೇಲೂರು:
ವರ್ಷದಿಂದ ಕುಂಟುತ್ತ ಸಾಗಿರುವ ಪಟ್ಟಣದ ಬಿಕ್ಕೋಡು ರಸ್ತೆ ಕಾಮಗಾರಿಯಿಂದಾಗಿ ಟ್ರಾೃಕ್ಟರ್ ಒಂದು ರಸ್ತೆ ಬದಿಯ ಚರಂಡಿಗೆ ಸಿಲುಕಿ ವಾಹನ ದಟ್ಟಣೆ ಉಂಟಾದ್ದರಿಂದ ಸ್ಥಳೀಯರು ರಸ್ತೆ ಸಂಚಾರ ತಡೆ ನಡೆಸಿ, ಟಯರ್‌ಗೆ ಬೆಂಕಿ ಹಚ್ಚಿ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಶನಿವಾರ ಸಂಜೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.