ಉತ್ತಮ ದಾರಿಯಲ್ಲಿ ಸಾಗಲು ಮಾರ್ಗದರ್ಶನ ಅಗತ್ಯ

ಜೆ.ಮಾವಿನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ 7ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನು ಶ್ರೀ ಗುರುಪರದೇಶಿ ಕೇಂದ್ರ ಸ್ವಾಮೀಜಿ ಅಭಿನಂದಿಸಿದರು. ಶ್ರೀ ಕುಮಾರ ಸ್ವಾಮೀಜಿ, ತೋಟಿ ನಾಗರಾಜ್, ಮಧುಸೂದನ್, ಕೃಪಾಶಂಕರ್, ರಾಜು, ಎಂ.ಎಸ್.ಸುರೇಶ್, ಎಸ್.ಎಂ.ಮಧು, ನಾಗರಾಜ್ ಇದ್ದರು.
ಜೆ.ಮಾವಿನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ 7ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನು ಶ್ರೀ ಗುರುಪರದೇಶಿ ಕೇಂದ್ರ ಸ್ವಾಮೀಜಿ ಅಭಿನಂದಿಸಿದರು. ಶ್ರೀ ಕುಮಾರ ಸ್ವಾಮೀಜಿ, ತೋಟಿ ನಾಗರಾಜ್, ಮಧುಸೂದನ್, ಕೃಪಾಶಂಕರ್, ರಾಜು, ಎಂ.ಎಸ್.ಸುರೇಶ್, ಎಸ್.ಎಂ.ಮಧು, ನಾಗರಾಜ್ ಇದ್ದರು.
Published on
ನುಗ್ಗೇಹಳ್ಳಿ: ಮಾನವ ಜೀವನ ಉತ್ಕೃಷ್ಟವಾದದು. ಅರಿವು, ಆಚಾರಗಳ ಪ್ರಜ್ಞೆ ಬೇಕು. ಅರಿವಿನ ದಾರಿಯಲ್ಲಿ ಮುನ್ನಡೆಯಲು ಗುರುವಿನ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ಕೆರಗೋಡಿ ರಂಗಾಪುರ ಮಠದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಹೋಬಳಿಯ ಜೆ. ಮಾವಿನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ಸ್ವಾಮಿಯ 7ನೇ ವಾರ್ಷಿಕೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಮಾನವೀಯತೆಯಲ್ಲಿ ನಂಬಿಕೆ, ವಿಶ್ವಾಸಗಳನ್ನು ಎಂದಿಗೂ ಕಳೆದುಕೊಳ್ಳಬಾರದು. ಸಂಕಷ್ಟಗಳನ್ನು ಎದುರಿಸಿದ ಮನುಷ್ಯ ಜೀವನದಲ್ಲಿ ಯಶಸ್ಸು ಕಾಣುತ್ತಾನೆ. ರೈತರ ಬದುಕಿನಲ್ಲಿ ಹೊಸ ಬೆಳಕು ಮೂಡಲಿ. ಈ ಯುಗಾದಿಯ ಸಂವತ್ಸರದಲ್ಲಿ ಮಂಗಳ ಕಾರ್ಯಗಳು ಹೆಚ್ಚು ನಡೆಯುತ್ತವೆ. ಸುಳ್ಳು ನಿಲ್ಲಲ್ಲ ಅಡಗುತ್ತದೆ. ಸತ್ಯ ಉಳಿಯುತ್ತದೆ. ದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂದು ತಿಳಿಸಿದರು.
ತಾಲೂಕಿನ 100 ಕೆರೆಗಳಿಗೆ ಹೇಮಾವತಿ ನದಿಯಿಂದ ನೀರು ತುಂಬಿಸಲು ಶ್ರಮಿಸಿರುವ ಶಾಸಕ ಸಿ.ಎನ್.ಬಾಲಕೃಷ್ಣ ಅವರಿಗೆ ಮುಂದಿನ ದಿನಗಳಲ್ಲಿ ಮಂತ್ರಿಯಾಗುವ ಯೋಗವಿದೆ. ನಿಮ್ಮ ಪ್ರೀತಿ, ವಿಶ್ವಾಸ ಅವರ ಮೇಲಿರಲಿ. ಬೇರೆ ತಾಲೂಕುಗಳಿಗಿಂತಲೂ ಚನ್ನರಾಯಪಟ್ಟಣ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರಲು ಶಾಸಕರು ಮುಂದಾಗಿದ್ದಾರೆ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ತೋಟಿ ನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರಕ್ಕೆ 11 ಕೋಟಿ ರೂ. ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಲಾಗಿದೆ. ಮುಂದಿನ ಹಂಗಾಮಿಗೆ 900 ಮೀಟರ್ ಉಳಿದ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಕೆರೆಗಳಿಗೆ ನೀರು ಹರಿಸಲಾಗುವುದು. ಅಕ್ಕನಹಳ್ಳಿ ವೃತ್ತದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಈ ಭಾಗದ ರೈತರಿಗೆ 15 ಕೋಟಿ ರೂ. ರಿಯಾಯಿತಿ ಸಾಲ ನೀಡಲಾಗಿದೆ ಎಂದರು.
ಅಕ್ಕನಹಳ್ಳಿ ಕುಮಾರ ಸ್ವಾಮೀಜಿ, ಟಿಎಪಿಸಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಂ.ಮಧು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಎನ್.ಆರ್. ಕೃಪಾಶಂಕರ್, ಮುಖಂಡರಾದ ತಿಪಟೂರು ಮಧುಸೂದನ್, ಎಂ.ಎಸ್.ಸುರೇಶ್, ಎಂ.ಎಸ್.ರಾಜು, ನವೀನ್, ನಾಗರಾಜ್, ಗನ್ನಿ ಕುಮಾರ್, ವಿಶ್ವನಾಥ್, ಸೋಮಶೇಖರ್, ಎಸ್.ಜಿ.ಚಿರಂಜೀವಿ, ಮರಿಶೆಟ್ಟಿಹಳ್ಳಿ ಸತೀಶ್, ಅಕ್ಕನಹಳ್ಳಿ ದಯಾನಂದ್, ಆನಂದ್, ಗಂಗಣ್ಣ, ಮುಳ್ಕೆರೆ ಗಿರೀಶ್, ಪಂಚಾಕ್ಷರಿ, ಈಶ್ವರಪ್ಪ, ರೇಣುಕಪ್ಪ, ಅಪ್ಪಾಜಿಗೌಡ, ಸಿದ್ದರಾಮಪ್ಪ, ರಾಜಪ್ಪ, ರಮೇಶ್, ಸೌಪರ್ಣಿಕಾ ಸುರೇಶ್, ಚಂದನ್, ಸುರೇಶ್, ಅನಿಲ್ ಕುಮಾರ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net