ಫೆ.16ರಂದು ಆದಿಶಕ್ತಿ ಹನಿಕೆ ಕರಿಯಮ್ಮನವರನ್ನು ಬರಮಾಡಿಕೊಂಡು ಮುಂಜಾನೆ ಯಗಚಿ ಹೊಳೆಯಲ್ಲಿ ಗಂಗೆ ಪೂಜೆಯೊಂದಿಗೆ ಗ್ರಾಮಕ್ಕೆ ಪೂರ್ಣ ಕುಂಭ ಕಳಸದೊಂದಿಗೆ ಅಗಮಿಸಿ, ಗಣಪತಿ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಗಳು ಆರಂಭವಾಗುತ್ತವೆ. ನವಗ್ರಹ ಪೂಜೆ, ಪಂಚ ಕಳಸ ಪೂಜೆ, ಪ್ರಧಾನ ಕಳಸ ಪೂಜೆ ನಂತರ ದೇವಾಲಯದ ಬಸವೇಶ್ವರಸ್ವಾಮಿ ಮತ್ತು ಸಿದ್ದೇಶ್ವರಸ್ವಾಮಿ, ವೀರಭದ್ರಸ್ವಾಮಿ, ತಿರುಮಲಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಲಾಗುವುದು. ನಂತರ ದೇವರಿಗೆ ಪುಷ್ಪಾಲಂಕಾರ ಮಾಡಲಾಗುತ್ತದೆ. ಸಂಜೆ ಲೋಕ ಕಲ್ಯಾಣಾರ್ಥವಾಗಿ ಗಣ ಹೋಮ, ರುದ್ರ ಹೋಮ, ಜಯಾದಿ ಹೋಮಗಳು ನೆರವೇರುತ್ತವೆ.