ಮಠ, ಮಂದಿರಗಳು ನೆಮ್ಮದಿ ನೀಡುವ ತಾಣಗಳು

 ಕೆಂಬಾಳು ಸಮೀಪದ ಕಂಬದಕಲ್ಲು ಮಹಾಸಂಸ್ಥಾನ ಮಠದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಡಾ.ಮಹೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಸ್ವಯಂ ಪ್ರಕಾಶ ಹಿರಿಯಣ್ಣ ಸ್ವಾಮೀಜಿ, ಲೋಕೇಶ್ ದಾಸ್, ಚಂದ್ರಣ್ಣ, ಬಸವರಾಜ್, ಮಿಲ್ಟ್ರಿ ಮಂಜುನಾಥ್, ಕಲ್ಲೇ ಸೋಮನಹಳ್ಳಿ ತಮ್ಮಯ್ಯ, ಇದ್ದರು.
ಕೆಂಬಾಳು ಸಮೀಪದ ಕಂಬದಕಲ್ಲು ಮಹಾಸಂಸ್ಥಾನ ಮಠದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಡಾ.ಮಹೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಸ್ವಯಂ ಪ್ರಕಾಶ ಹಿರಿಯಣ್ಣ ಸ್ವಾಮೀಜಿ, ಲೋಕೇಶ್ ದಾಸ್, ಚಂದ್ರಣ್ಣ, ಬಸವರಾಜ್, ಮಿಲ್ಟ್ರಿ ಮಂಜುನಾಥ್, ಕಲ್ಲೇ ಸೋಮನಹಳ್ಳಿ ತಮ್ಮಯ್ಯ, ಇದ್ದರು.
Published on
ಬಾಗೂರು: ಮಠ, ಮಂದಿರ ಹಾಗೂ ಆಧ್ಯಾತ್ಮಿಕ ಕೇಂದ್ರಗಳು ನೆಮ್ಮದಿಯ ತಾಣಗಳಾಗಿದ್ದು ಕುಟುಂಬ ಸಮೇತರಾಗಿ ವಾರಕ್ಕೆ ಒಮ್ಮೆ ಭೇಟಿ ನೀಡುವುದನ್ನು ರೂಢಿಸಿಕೊಳ್ಳಬೇಕು ಎಂದು ಪುರವರ್ಗ ಹಿರೇಮಠದ ಪೀಠಾಧ್ಯಕ್ಷ ಡಾ.ಶ್ರೀಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಹೋಬಳಿಯ ಕೆಂಬಾಳು ಸಮೀಪದ ಶ್ರೀಕ್ಷೇತ್ರ ಕಂಬದಕಲ್ಲುಬಾರೆಯ ಕಂಬದಕಲ್ಲು ಮಹಾಸಂಸ್ಥಾನ ಮಠದ ಗುರುಕುಲಾಶ್ರಮದಲ್ಲಿ ಶ್ರೀಮಠದ 21ನೇ ವಾರ್ಷಿಕೋತ್ಸವ ಹಾಗೂ ರೇಣುಕಾಚಾರ್ಯ ಮೂರ್ತಿಯ ದಶಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಇತ್ತೀಚಿನ ದಿನಗಳಲ್ಲಿ ವೃದ್ಧರು ಮಾತ್ರ ಮಠಕ್ಕೆ ಆಗಮಿಸುತ್ತಾರೆ. ಯುವ ಸಮುದಾಯ ಮೋಜು ಮಸ್ತಿಯಲ್ಲಿ ತೊಡಗುತ್ತಿದೆ. ಹಾಗಾಗಿ ಕುಟುಂಬದಲ್ಲಿ ಕಲಹ ಉಂಟಾಗುತ್ತಿದೆ ಎಂದರು.
ನಿತ್ಯವೂ ದೇವಾಲಯಕ್ಕೆ ಹೋಗುವುದನ್ನು ರೂಢಿಸಿಕೊಂಡರೆ ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಮಕ್ಕಳಲ್ಲಿ ಏಕಾಗ್ರತೆ ಮೂಡುತ್ತದೆ. ಮಠಗಳನ್ನು ಯಾವುದೇ ಶ್ರೀಗಳು ಬೆಳೆಸುವುದಿಲ್ಲ, ಅಲ್ಲಿನ ಭಕ್ತರ ಸಹಕಾರದಿಂದ ಮಠಗಳು ಶ್ರೀಮಂತಗೊಳ್ಳುತ್ತವೆ. ಮಠಾಧೀಶರು ಸಮಾಜದ ಶಾಂತಿಗಾಗಿ ನಿತ್ಯವೂ ಪೂಜೆ ಹಾಗೂ ಪ್ರವಚನ ನೀಡುತ್ತಾರೆ. ಅದನ್ನು ಭಕ್ತರು ಪಾಲಿಸಬೇಕಾಗಿದೆ ಎಂದರು.
ಯಾವ ಸ್ಥಳದಲ್ಲಿ ನಿರಂತರವಾಗಿ ಭಗವಂತನ ಸ್ಮರಣೆ ಮಾಡಲಾಗುತ್ತದೆಯೋ ಅಲ್ಲಿ ಸಾಕಷ್ಟು ಶಕ್ತಿ ಇರುತ್ತದೆ. ಹಾಗಾಗಿ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸಾಕಷ್ಟು ಧನಾತ್ಮಕ ಶಕ್ತಿ ಇರುತ್ತದೆ. ಎರಡು ದಶಕಗಳ ಹಿಂದೆ ಕುಟುಂಬದಲ್ಲಿ ಕಲಹ ಉಂಟಾದಾಗ ತೀರ್ಥಕ್ಷೇತ್ರಕ್ಕೆ ತೆರಳುತ್ತಿದ್ದರು, ಈಗ ಮಾಲ್‌ಗಳು, ರೆಸಾರ್ಟ್‌ಗಳಲ್ಲಿ ಕಾಲ ಕಳೆಯುತ್ತಾರೆ. ಇದು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಯಾವ ವ್ಯಕ್ತಿ ತೀರ್ಥ ಕ್ಷೇತ್ರದಲ್ಲಿ ಒಂದು ದಿವಸ ಕಳೆಯುತ್ತಾನೋ ಅವನ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಸನಾತನ ಧರ್ಮ ಉಳಿಯಬೇಕೆಂದರೆ ಮಠಗಳು, ಆಧ್ಯಾತ್ಮಿ ಕೇಂದ್ರಗಳ ಸಂಖ್ಯೆ ಹೆಚ್ಚಬೇಕು, ಮಠಾಧೀಶರು ಧರ್ಮ ಉಳಿಸುವ ಕಡೆ ಮುಖ ಮಾಡಬೇಕು, ಸಾಕಷ್ಟು ಮಠಗಳು ವಾಣಿಜ್ಯ ವ್ಯವಹಾರ ಮಾಡುತ್ತಿವೆ, ಧರ್ಮ ಪ್ರಚಾರ ಮಾಡುವ ಕಡೆ ಗಮನ ಹರಿಸುತ್ತಿಲ್ಲ, ಭಕ್ತರಿಗೆ ಆಧ್ಯಾತ್ಮಿಕ ಪ್ರವಚನ ನೀಡುತ್ತಿಲ್ಲ, ಹಾಗಾಗಿ ಭಕ್ತರು ದಿಕ್ಕು ತಪ್ಪುತ್ತಿದ್ದಾರೆ ಎಂದರು.
ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ವಿ.ಎನ್.ಶ್ರೀಧರಮೂರ್ತಿ ಮಾತನಾಡಿ, ಸನಾತನ ಧರ್ಮ ಅಚರಣೆಗಳು ಪ್ರಕೃತಿಗೆ ಪೂರಕವಾಗಿವೆ. ಪ್ರಕೃತಿಯನ್ನು ಪೂಜಿಸುತ್ತೇವೆ, ಪ್ರಾಣಿ-ಪಕ್ಷಿಗಳು, ರಾಸುಗಳಲ್ಲಿ ದೇವರನ್ನು ಕಾಣುತ್ತೇವೆ, ಅವುಗಳನ್ನು ಪ್ರೀತಿಸುವಂತೆ ಸಂದೇಶ ಸಾರುವುದಲ್ಲದೆ ಮಠಗಳಲ್ಲಿ ಪ್ರಾಣಿಗಳನ್ನು ಸಾಕುವ ಮೂಲಕ ಅವುಗಳಲ್ಲಿ ದೈವತ್ವವನ್ನು ಕಾಣುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಬಂದಕಲ್ಲು ಮಹಾ ಸಂಸ್ಥಾನ ಮಠದ ಶ್ರೀಸ್ವಯಂಪ್ರಕಾಶ ಹಿರಿಯಣ್ಣ ಸ್ವಾಮೀಜಿ, ತಿಪಟೂರು ಷಡಕ್ಷರ ಮಠದ ಶ್ರೀರುದ್ರಮುನಿ ಸ್ವಾಮೀಜಿ, ಹುಣಸೂರು ಗುರು ಮುಕ್ಕಣ್ಣೇಶ್ವರಸ್ವಾಮಿ ಮಠದ ಶ್ರೀನಿಜಗುಣ ಒಡೆಯರ್ ಸ್ವಾಮೀಜಿ, ಹುಬ್ಬಳಿ ಸಿದ್ಧಾರೂಢ ಮಠದ ಶ್ರೀಸಿದ್ದಪ್ಪ ಹೂಗಾರ್, ಮಂಡ್ಯದ ಮುದುಗನೂರು ಆಶ್ರಮದ ಜೈರೇವುಕುಮಾರಿ, ಶ್ರೀವಿಠಲ ಸೇವಾಶ್ರಮದ ಲೋಕೇಶ್ ದಾಸ್, ಮಂಡ್ಯ ಶಂಕರ ಮಠದ ಮುಕುಂದಪ್ಪ ಸ್ವಾಮೀಜಿ, ಚಿಕ್ಕಮಗಳೂರಿನ ಯೋಗಿದೇವರಾಜು, ವಿಶ್ವಹಿಂದೂ ಪರಿಷತ್ ಜಿಲ್ಲಾ ಮಾಜಿ ಉಪಾಧ್ಯಕ್ಷ ಕೆ.ಶಾಮಸುಂದರ್, ತಾಪಂ ಮಾಜಿ ಸದಸ್ಯ ಬಸವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಸ್ವಾಮಿ, ಮುಖಂಡರಾದ ಮಿಲ್ಟ್ರಿ ಮಂಜು, ಸುರೇಶ್, ಕಲ್ಲೇ ಸೋಮನಹಳ್ಳಿ, ತಮ್ಮಯ್ಯಣ್ಣ, ನಳಿನ, ನವೀನ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net