ವ್ಯಸನಮುಕ್ತ ಜೀವನಕ್ಕೆ ಅರಿವು

ಹಾಸನದಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ಅಂಗವಾಗಿ ಮಾದಕ ವ್ಯಸನ ಮುಕ್ತ ಅರಿವು ಹಾಗೂ ಕಾನೂನು ಪರಿಪಾಲನೆ ಕುರಿತು ವಿಶೇಷ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉಪ ಪೊಲೀಸ್ ಅಧೀಕ್ಷ ಗಂಗಾಧರ್, ಜೆ.ಮಮತಾ, ಬಿ.ಆರ್. ಉದಯ್ ಕುಮಾರ್, ಡಾ.ರಂಗಲಕ್ಷ್ಮೀ ಇತರರಿದ್ದರು.
ಹಾಸನದಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ಅಂಗವಾಗಿ ಮಾದಕ ವ್ಯಸನ ಮುಕ್ತ ಅರಿವು ಹಾಗೂ ಕಾನೂನು ಪರಿಪಾಲನೆ ಕುರಿತು ವಿಶೇಷ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉಪ ಪೊಲೀಸ್ ಅಧೀಕ್ಷ ಗಂಗಾಧರ್, ಜೆ.ಮಮತಾ, ಬಿ.ಆರ್. ಉದಯ್ ಕುಮಾರ್, ಡಾ.ರಂಗಲಕ್ಷ್ಮೀ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವ್ಯಸನಮುಕ್ತ ಜೀವನಕ್ಕೆ ಅರಿವು
  • ರೆಡ್ ಕ್ರಾಸ್ ಸಂಸ್ಥೆಯಿಂದ ಹಲವು ಮಾನವೀಯ ಕಾರ್ಯ
  • ಹೆಮ್ಮಿಗೆ ಮೋಹನ್ ಅಭಿಪ್ರಾಯ
ಹಾಸನ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಸನ ಹಾಗೂ ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನದ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಮಾದಕ ವ್ಯಸನಮುಕ್ತ ಅರಿವು ಹಾಗೂ ಕಾನೂನು ಪರಿಪಾಲನೆ ಕುರಿತು ಶುಕ್ರವಾರ ವಿಶೇಷ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲೆಯಲ್ಲಿ ವಿವಿಧ ಮಾನವೀಯ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದು ಉತ್ತಮ ನಾಗರಿಕರಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಸನದ ಪ್ರಾಂತಪಾಲ ಹೆಮ್ಮಿಗೆ ಮೋಹನ್ ಕರೆ ನೀಡಿದರು.
ಉಪ ಪೊಲೀಸ್ ಅಧೀಕ್ಷ ಗಂಗಾಧರ್, ಮಾದಕ ವ್ಯಸನದಿಂದ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಕುರಿತು ವಿವರಿಸಿದರು.
ಸೇವಾ ಅವಧಿಯಲ್ಲಿ ಕಂಡ ನೈಜ ಘಟನೆಗಳನ್ನು ಉದಾಹರಿಸಿ, ವ್ಯಸನದಿಂದ ಮುಕ್ತಿ ಪಡೆಯುವ ಮಾರ್ಗಗಳು ಹಾಗೂ ಕಾನೂನು ಉಲ್ಲಂಘನೆ ಪ್ರಕರಣಗಳಲ್ಲಿ ಸಿಲುಕಿದಾಗ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಅನುಭವಿಸುವ ಸಂಕಷ್ಟಗಳ ಬಗ್ಗೆ ವಿವರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜೆ.ಮಮತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನತೆ ಹಾಗೂ ವಿದ್ಯಾರ್ಥಿಗಳಲ್ಲಿ ತಂಬಾಕು ಸೇವನೆ ಹೆಚ್ಚಾಗುತ್ತಿದ್ದು, ಇದು ಕ್ಯಾನ್ಸರ್ ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ತಂಬಾಕು ಮತ್ತು ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಿದರು. ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಬಿ.ಆರ್. ಉದಯ್ ಕುಮಾರ್, ಡಾ.ರಂಗಲಕ್ಷ್ಮೀ, ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಒ.ಆರ್.ನಟರಾಜ್, ಶಬ್ಬೀರ್ ಅಹ್ಮದ್, ಯುವ ರೆಡ್ ಕ್ರಾಸ್ ಸಂಯೋಜಕ ಡಾ.ಹೇಮಂತ್‌ಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net