ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ

ಭಾರತದ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರ್ ವಾಜಪೇಯಿ ಅವರ 101ನೇ ವರ್ಷದ ಜನ್ಮ ದಿನವನ್ನು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು. ಅಮಿತ್ ಶೆಟ್ಟಿ,  ಬಿ.ಎಚ್.ನಾರಾಯಣಗೌಡ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್, ಶೋಭನ್ ಬಾಬು, ಆರ್. ಮೋಹನ್ ಕುಮಾರ್, ಯುವ ಮೋರ್ಚಾ ಮಾಜಿ ಅಧ್ಯಕ್ಷ ಚನ್ನಕೇಶವ, ಎಚ್.ಎನ್. ನಾಗೇಶ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ
  • 101ನೇ ವರ್ಷದ ಜನ್ಮ ದಿನ
ಹಾಸನ: ಭಾರತದ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರ್ ವಾಜಪೇಯಿ ಅವರ 101ನೇ ವರ್ಷದ ಜನ್ಮ ದಿನವನ್ನು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು.
ಇದೆ ವೇಳೆ ಪಕ್ಷಕ್ಕಾಗಿ ಹಲವು ವರ್ಷಗಳ ಕಾಲ ದುಡಿದ ಬಿಜೆಪಿ ಹಿರಿಯರಾದ ರಮೇಶ್ ಮತ್ತು ಪ್ರೇಮಕುಮಾರ್ ಅವರನ್ನು ಸನಾನಿಸಲಾಯಿತು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ವರ್ಷದ ಜನ್ಮ ದಿನವನ್ನು ಅಟಲ್ ಜನ್ಮ ಶತಾಬ್ಧಿ ದಿನವನ್ನಾಗಿ ಆಚರಿಸಲಾಗುತ್ತಿದೆ.
ವಾಜಪೇಯಿ ಅವರು 1925ರಲ್ಲಿ ಜನ್ಮ ತಾಳಿದ್ದು, ಅವರು ಶಿಕ್ಷಣ ಪಡೆದು ಜನಸಂಘದ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡುತ್ತಾರೆ. ಜನಸಂಘದ ಮೂಲಕ ಪಕ್ಷವನ್ನು ಕಟ್ಟಿ ರಾಜಕೀಯದಲ್ಲಿ ಅವರೆ ಕ್ರಾಂತಿಯನ್ನು ಮೂಡಿಸಿದವರು. ಪ್ರಧಾನಿಯಾಗಿ ಹಲವಾರು ಯೋಜನೆಯನ್ನು ಜಾರಿಗೆ ತಂದರು. ಪಕ್ಷಕ್ಕಿಂತ ದೇಶ ಮುಖ್ಯ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಹೇಳಿಕೊಟ್ಟವರು. ಯಾವುದೇ ಸ್ವಾರ್ಥವಿಲ್ಲದೆ ಪಕ್ಷಾತೀತವಾಗಿ ಇದ್ದವರು. ಅಜಾತ ಶತ್ರು. ಹಲವಾರು ಕವನ ಕೂಡ ಬರೆದಿದ್ದಾರೆ. ಅವರ ಆದರ್ಶವನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್.ನಾರಾಯಣಗೌಡ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್, ಶೋಭನ್ ಬಾಬು, ಆರ್. ಮೋಹನ್ ಕುಮಾರ್, ಯುವ ಮೋರ್ಚಾ ಮಾಜಿ ಅಧ್ಯಕ್ಷ ಚನ್ನಕೇಶವ, ಎಚ್.ಎನ್. ನಾಗೇಶ್, ವೇದಾವತಿ, ಸುಮಾ, ದಯಾನಂದ್, ಮಹೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net