ಮನುಕುಲದ ಮೇಲೆ ಆಧುನಿಕ ಜೀವನಶೈಲಿ ದುಷ್ಪರಿಣಾಮ

ಅರಸೀಕೆರೆ ನಗರದ ವೀರಶೈವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಡಾ. ಶ್ರೀಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಇಷ್ಟಲಿಂಗ ಪೂಜೆ ನೆರವೇರಿಸಿದರು. ಶ್ರೀಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ, ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಶ್ರೀಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀಶಶಿಶೇಖರ ಸಿದ್ದಬಸವ ಸ್ವಾಮೀಜಿ ಇತರರಿದ್ದರು.
ಅರಸೀಕೆರೆ ನಗರದ ವೀರಶೈವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಡಾ. ಶ್ರೀಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಇಷ್ಟಲಿಂಗ ಪೂಜೆ ನೆರವೇರಿಸಿದರು. ಶ್ರೀಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ, ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಶ್ರೀಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀಶಶಿಶೇಖರ ಸಿದ್ದಬಸವ ಸ್ವಾಮೀಜಿ ಇತರರಿದ್ದರು.
Published on
ಅರಸೀಕೆರೆ: ಆಧುನಿಕ ಜೀವನಶೈಲಿ ಮನುಕುಲದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದ್ದು, ಜಾಗೃತರಾಗದಿದ್ದರೆ ಉಳಿಗಾಲವಿಲ್ಲ ಎಂದು ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಡಾ.ಶ್ರೀಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಎಚ್ಚರಿಸಿದರು.
ನಗರದ ವೀರಶೈವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಭೆ ಮತ್ತು ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಬಲದಿಂದ ಮನುಷ್ಯ ಆಧುನಿಕತೆಯ ಉತ್ತುಂಗಕ್ಕೇರಿದ್ದಾನೆ. ನಗರ, ಗ್ರಾಮೀಣ ಭಾಗದಲ್ಲಿ ಪ್ರಕೃತಿದತ್ತವಾದ ಹೆರಿಗೆ ಮಾಯವಾಗುವ ಮೂಲಕ ಸಿಜೇರಿಯನ್ ಶಸ್ತ್ರಚಿಕಿತ್ಸೆಗೆ ಶರಣಾಗಿದ್ದಾರೆ. ಇಂತಹ ಸಮಯದಲ್ಲಿ ಮಕ್ಕಳು ಜನಿಸಿದ ತಕ್ಷಣ ಲಿಂಗಧಾರಣೆ ಮಾಡುವ ಬದಲು ಹತ್ತು, ಹದಿನೈದು ದಿನಗಳ ನಂತರ ಮಗುವಿಗೆ ಲಿಂಗಧಾರಣೆ ಮಾಡಲಾಗುತ್ತಿದ್ದು, ಪದ್ಧತಿ ಮರೆಯಾಗಿದೆ. ನಿಸರ್ಗದ ಕಡೆಗೆ ಮರಳದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು.
ಅರಸೀಕೆರೆ ತಾಲೂಕು ಸಾಧು, ಸಂತರು, ಸಿದ್ಧರು, ಆಧ್ಯಾತ್ಮಿಕ ದಾರ್ಶನಿಕರು ನೆಲೆಸಿರುವ ತಪೋಭೂಮಿಯಾಗಿದ್ದು, ಈ ಕ್ಷೇತ್ರದಲ್ಲಿ ಪಂಚ ಪೀಠಾಧೀಶರು ನಡೆದಾಡುವ ಮೂಲಕ ಈ ತಪೋಭೂಮಿಗೆ ಮತ್ತಷ್ಟು ಧಾರ್ಮಿಕ ಶಕ್ತಿ ತುಂಬಿದ್ದಾರೆ. ಜತೆಗೆ ಪಂಚ ಪೀಠಾಧೀಶರೊಂದಿಗೆ ಧಾರ್ಮಿಕ ಅವಿನಾಭಾವ ಸಂಬಂಧ ಹೊಂದಿರುವ ಜನರು ಪುಣ್ಯವಂತರಾಗಿದ್ದಾರೆ. ಇಷ್ಟಲಿಂಗ ಪೂಜೆಗೆ ಯಾವುದೇ ಜಾತಿ ತಾರತಮ್ಯವಿಲ್ಲ. ಲಿಂಗಧಾರಣೆಯೇ ನಮ್ಮ ಧರ್ಮಾಚರಣೆಯಾಗಿದ್ದು, ಸದಾ ದೇವರೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದೇ ವೀರಶೈವ ಸಿದ್ದಾಂತದ ಮೂಲವಾಗಿದೆ. ಪಂಚಪೀಠಗಳಾದ ಬಾಳೆಹೊನ್ನೂರು, ಉಜ್ಜೈನಿ, ಕೇದಾರ, ಶ್ರೀಶೈಲ ಹಾಗು ಕಾಶಿ ಕ್ಷೇತ್ರಗಳೊಂದಿಗೆ ಗುರುತಿಸಿಕೊಂಡಿರುವ ಐತಿಹಾಸಿಕ ಪುಣ್ಯ ಕ್ಷೇತ್ರಗಳಾಗಿವೆ. ಐದು ಪೀಠಗಳು ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಮತ್ತು ಪ್ರಸಾದಗಳೊಂದಿಗೆ ಪರಮೇಶ್ವರನ ಐದು ಮುಖಗಳಾದ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಮುಖಗಳನ್ನು ಹೊಂದಿದ ಪೀಠಗಳಾಗಿವೆ ಎಂದು ಹೇಳಿದರು.
ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಡಾ.ಶ್ರೀಕರಿವೃಷಭ ಶಿವಯೋಗೀಶ್ವರ ಸ್ವಾಮಿಜಿ, ಗುಬ್ಬಿ ತಾಲೂಕು ಹಿರೇಮಠ ದೊಡ್ಡಗುಣಿ ಶ್ರೀರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಗಂಗಾ ಕ್ಷೇತ್ರ ಮೇಲಗಣವಿ ವೀರಸಿಂಹಾಸನ ಮಠದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಜಿ, ಯಸಳೂರು ತೆಂಕಲಗೂಡು ಬೃಹನ್ಮಠದ ಶ್ರೀಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ , ಡಿ.ಎಂ.ಕುರ್ಕೆ ಭೂದಿಹಾಳ್ ವೀರಕ್ತಮಠದ ಶ್ರೀಶಶಿಶೇಖರ ಸಿದ್ದಬಸವ ಸ್ವಾಮೀಜಿ, ಮಾಜಿ ಶಾಸಕ ಕೆ.ಪಿ ಪ್ರಭುಕುಮಾರ್, ಮುಖಂಡ ಕೆ.ವಿ.ನಿರ್ವಾಣ ಸ್ವಾಮಿ, ಜೆಡಿಎಸ್ ಮುಖಂಡ ಎನ್.ಆರ್ ಸಂತೋಷ್ ಮಾತನಾಡಿದರು.
ಆಚರಣಾ ಸಮಿತಿ ಅಧ್ಯಕ್ಷ ಅಣ್ಣೇನಹಳ್ಳಿ ಸಿದ್ದರಾಜು, ವೀರಶೈವ ಸಮಾಜದ ಅಧ್ಯಕ್ಷ ಮುರುಂಡಿ ಶಿವಯ್ಯ, ಉಪಾಧ್ಯಕ್ಷ ಎನ್.ಎಸ್ ಮಂಜುನಾಥ್ , ಕಾರ್ಯದರ್ಶಿ ಗೀಜಿಹಳ್ಳಿ ಪ್ರವೀಣ್ ಕುಮಾರ್ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net