ಧರ್ಮದ ಮೇಲಿನ ದೌರ್ಜನ್ಯ ತಡೆಯಲು ಸಂಕಲ್ಪ ಮಾಡಿ

 ಹಿಂದೂ ಸಮಾಜೋತ್ಸವ ಹಿನ್ನಲೆಯಲ್ಲಿ ಅರಸೀಕೆರೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶೋಭಾಯಾತ್ರೆ ನಡೆಯಿತು. ಶ್ರೀ ಜಯಬಸವಾನಂದ ಸ್ವಾಮೀಜಿ, ಕೇಶವಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಹಿಂದೂ ಸಮಾಜೋತ್ಸವ ಹಿನ್ನಲೆಯಲ್ಲಿ ಅರಸೀಕೆರೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶೋಭಾಯಾತ್ರೆ ನಡೆಯಿತು. ಶ್ರೀ ಜಯಬಸವಾನಂದ ಸ್ವಾಮೀಜಿ, ಕೇಶವಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Published on
ಅರಸೀಕೆರೆ : ಸನಾತನ ಹಿಂದೂ ಧರ್ಮ ಹಾಗೂ ಅನುಯಾಯಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಮುಖ್ಯಸ್ಥ ದೊ.ಕೇಶವಮೂರ್ತಿ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನ ಪೂರೈಸಿದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಗರದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಿಂದೂ ಧರ್ಮಕ್ಕೆ ಚ್ಯುತಿ ತರುವ ಕೆಲಸ ನಿತ್ಯ ನಿರಂತರವಾಗಿ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಸಹಿಷ್ಣುತೆ ಪ್ರತಿಪಾದಿಸುವ ಹಿಂದೂಗಳ ಮೇಲೆ ಪಾಕಿಸ್ತಾನ, ಬಾಂಗ್ಲಾದೇಶ ಒಳಗೊಂಡಿಂತೆ ಕೆಲ ದೇಶಗಳಲ್ಲಿ ಗಧಾ ಪ್ರಹಾರ ಮಾಡಲಾಗಿದೆ. ಅತ್ಯಾಚಾರ, ಕೊಲೆ, ಸುಲಿಗೆ, ಹಲ್ಲೆಯ ವರದಿಗಳು ಪ್ರತಿಧ್ವನಿಸಿರುವುದು ಖಂಡನೀಯ ಎಂದರು. ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಹಿಂದೂ ಧರ್ಮದ ಉಳಿವಿಗಾಗಿ ಒಗ್ಗಟ್ಟಿನ ಹೋರಾಟ ನಡೆಸೋಣ ಎಂದು ಅವರು ಕರೆ ನೀಡಿದರು.
ಚಿಕ್ಕಮಗಳೂರಿನ ಶ್ರೀ ಜಯ ಬಸವಾನಂದ ಸ್ವಾಮೀಜಿ ಮಾತನಾಡಿ, ಪಾಲಕರು ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಪರಂಪರೆಯ ಪರಿಚಯ ಮಾಡಿಕೊಡುವ ಜತೆಗೆ ದೇಶ ಹಾಗೂ ಧರ್ಮವನ್ನು ಗೌರವಿಸುವ ಗುಣ ಬೆಳಸಬೇಕು ಎಂದು ಹೇಳಿದರು.
ಶೋಭಾಯಾತ್ರೆ: ಉತ್ಸವದ ಅಂಗವಾಗಿ ಪ್ರವಾಸಿ ಮಂದಿರದ ಆವರಣದಿಂದ ಬಸವೇಶ್ವರ ವೃತ್ತದವರೆಗೆ ಶೋಭಾಯಾತ್ರೆ ನಡೆಯಿತು. ತಾರಾವತಿ, ಮಣಿ ವಿಶ್ವಕರ್ಮ, ಸುಧಾ ಕಲ್ಯಾಣ್, ಶ್ವೇತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net