ಜಾವಗಲ್‌ನಲ್ಲಿ ಶ್ರಿರಾಮನವಮಿ ಆಚರಣೆ

ಜಾವಗಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ನಾಗರಾಜ್, ಮಂಜುನಾಥ್, ಸೋಮಣ್ಣ, ರಾಮಣ್ಣ, ಜಗದೀಶ್, ಕೆಂಚಪ್ಪ, ಶ್ರೀಕಾಂತ, ರಾಮು, ಈಶಣ್ಣ ಮತ್ತಿತರರು ಪಾಲ್ಗೊಂಡಿದ್ದರು.
ಜಾವಗಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ನಾಗರಾಜ್, ಮಂಜುನಾಥ್, ಸೋಮಣ್ಣ, ರಾಮಣ್ಣ, ಜಗದೀಶ್, ಕೆಂಚಪ್ಪ, ಶ್ರೀಕಾಂತ, ರಾಮು, ಈಶಣ್ಣ ಮತ್ತಿತರರು ಪಾಲ್ಗೊಂಡಿದ್ದರು.
Published on
ಅರಸೀಕೆರೆ ಗ್ರಾಮಾಂತರ: ಪರಿವಾರ ಸಮೇತ ಸೀತಾ ರಾಮಾಂಜನೇಯ ದೇವಾಲಯ ಸಮಿತಿ, ಜಾವಗಲ್ ಶ್ರೀಮಹಾಗಣಪತಿ ಗೆಳೆಯರ ಬಳಗ, ನೇಕಾರ ದೇವಾಂಗ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಗ್ರಾಮದಲ್ಲಿ ಶ್ರೀ ರಾಮ ನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ತಾಲೂಕಿನ ಜಾವಗಲ್ ಪಟ್ಟಣದಲ್ಲಿ ಶ್ರೀರಾಮನ ಚಿತ್ರಪಟವನ್ನು ಹೂವಿನಿಂದ ಅಲಂಕರಿಸಿದ್ದ ಸುಂದರ ರಥದಲ್ಲಿರಿಸಿ ಪೂಜೆ ನೆರವೇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿ ರಥ ಎಳೆದು ಭಕ್ತಿ ಮೆರೆದರು.
ಗ್ರಾಮಸ್ಥರಾದ ವಿ.ಟಿ.ಎಸ್.ನಾಗರಾಜು, ಜೆ.ಬಿ.ಮಂಜುನಾಥ್, ಬಟ್ಟೆ ಸೋಮಣ್ಣ, ರಾಮಣ್ಣ, ಜಗದೀಶ್, ಕೆಂಚಪ್ಪ, ಶ್ರೀಕಾಂತ, ರಾಮು, ಈಶಣ್ಣ, ಅರ್ಚಕರಾದ ಸುಹಾಸ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net