ಉತ್ತಮ ಮಳೆ; ಗರಿಗೆದರಿದ ಕೃಷಿ ಚಟುವಟಿಕೆ

ಅರಕಲಗೂಡು ತಾಲೂಕಿನಲ್ಲಿ ಬಿದ್ದ ಮಳೆಗೆ ಬಾಡುತ್ತಿದ್ದ ಗೆಣಸು ಬೆಳೆ ಹೊಲದಲ್ಲಿ ಹಸಿರು ಕಾಣಿಸುತ್ತಿದೆ.
ಅರಕಲಗೂಡು ತಾಲೂಕಿನಲ್ಲಿ ಬಿದ್ದ ಮಳೆಗೆ ಬಾಡುತ್ತಿದ್ದ ಗೆಣಸು ಬೆಳೆ ಹೊಲದಲ್ಲಿ ಹಸಿರು ಕಾಣಿಸುತ್ತಿದೆ.
Published on
ಅರಕಲಗೂಡು: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಉತ್ತಮವಾದ ಮಳೆ ಬಿದ್ದಿದ್ದು ಇಳೆಗೆ ತಂಪೆರೆದಿದೆ.
ಕಳೆದ ತಿಂಗಳು ಹಲವೆಡೆ ಒಮ್ಮೆ ಸಾಧಾರಣವಾಗಿ ಸುರಿದಿದ್ದ ಮುಂಗಾರು ಪೂರ್ವ ಮಳೆ ಮತ್ತೆ ತೀವ್ರವಾಗಿ ಕ್ಷೀಣಿಸಿದ್ದು ಬಿಸಿಲಿನ ಧಗೆ ಏರಿಕೆಯಾಗಿತ್ತು. ಇದೀಗ ತಾಲೂಕಿನಾದ್ಯಂತ ಅಲ್ಲಲ್ಲಿ ಹದ ಮಳೆಯಾಗಿದ್ದು ಭೂಮಿಯ ವಾತಾವರಣವನ್ನು ತಕ್ಕಮಟ್ಟಿಗೆ ತಣ್ಣಗಾಗಿಸಿದೆ.
ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆಯತ್ತ ಚಿತ್ತ ಹರಿಸಿದ್ದಾರೆ. ಸಾಗುವಳಿಗೆ ಜಮೀನಿಗೆ ಗೊಬ್ಬರ ಗೋಡು ಸಾಗಿಸಿ ಉತ್ತು ಬಿತ್ತನೆಗೆ ಹದಗೊಳಿಸುತ್ತಿದ್ದಾರೆ. ಇನ್ನು ಕೆಲವೆಡೆ ಕಳೆದ ತಿಂಗಳ ಸುರಿದ ಮಳೆಗೆ ಜಮೀನು ಉತ್ತು ಸಿದ್ಧಗೊಳಿಸಿದ್ದು ಈಗ ಬಿತ್ತನೆ ಕಾರ್ಯ ನಡೆಸುತ್ತಿದ್ದಾರೆ. ಹಲವೆಡೆ ತಂಬಾಕು ನಾಟಿ ಕಾರ್ಯವನ್ನು ಕೈಗೊಂಡಿದ್ದಾರೆ. ಒಂದೆರಡು ದಿನಗಳ ಕಾಲ ನಿರಂತರವಾಗಿ ಮಳೆ ಬೀಳಬೇಕು ಎನ್ನುತ್ತಾರೆ ರೈತರು.
ಮಳೆ ವಿವರ: ತಾಲೂಕಿನ ಮಳೆ ಮಾಪಕದಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ರಾಮನಾಥಪುರದಲ್ಲಿ 62.4 ಮಿಮೀ, ಕಸಬಾ 51.0 ಮಿಮೀ, ಮಲ್ಲಿಪಟ್ಟಣ 52.8, ದೊಡ್ಡಮಗ್ಗೆ 8.8, ಬಸವಾಪಟ್ಟಣ 11.0, ದೊಡ್ಡಬೆಮ್ಮತ್ತಿ 48.2, ಕೊಣನೂರಿನಲ್ಲಿ 60.0 ಮಿಮೀ ಮಳೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net