ಬೇಲೂರು ಪಟ್ಟಣದ ಅಭಿವೃದ್ಧಿಗೆ ಮನವಿ

ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಅಕ್ರಂ ಷರೀಫ್ ಅವರನ್ನು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಸನ್ಮಾನಿಸಿದರು. ಎಸ್.ಎಂ.ರಾಜು, ಲಕ್ಷ್ಮಣ್, ವಸಂತ ಕುಮಾರ್, ಸತೀಶ್, ಪ್ರದೀಪ್ ಇದ್ದರು.
ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಅಕ್ರಂ ಷರೀಫ್ ಅವರನ್ನು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಸನ್ಮಾನಿಸಿದರು. ಎಸ್.ಎಂ.ರಾಜು, ಲಕ್ಷ್ಮಣ್, ವಸಂತ ಕುಮಾರ್, ಸತೀಶ್, ಪ್ರದೀಪ್ ಇದ್ದರು.
Published on
ಬೇಲೂರು: ಪುರಸಭೆ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಅಕ್ರಂ ಷರೀಫ್‌ರವರನ್ನು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಶನಿವಾರ ಪುರಸಭೆ ಕಚೇರಿಯಲ್ಲಿ ಅಭಿನಂದಿಸಿ ಪಟ್ಟಣದ ಸಮಗ್ರ ಅಭಿವೃದ್ಧಿ ಹಾಗೂ ಮುಖ್ಯ ರಸ್ತೆ ವಿಸ್ತರಣೆಗೆ ಮುಂದಾಗುವಂತೆ ಮನವಿ ಮಾಡಿದರು.
ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು ಮಾತನಾಡಿ, ನೂತನ ಅಧ್ಯಕ್ಷರು ತಮ್ಮ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಲಿ. ಬೇಲೂರು ಪಟ್ಟಣ ಪ್ರವೇಶಿಸುವುದಕ್ಕೆ ಒಂದೇ ಮುಖ್ಯರಸ್ತೆ ಇರುವುದು. ಅದು ಕಿರಿದಾಗಿದ್ದು ಪ್ರತಿನಿತ್ಯ ವಾಹನಗಳ ದಟ್ಟಣೆ ಪ್ರವಾಸಿಗರು ಮತ್ತು ಸ್ಥಳೀಯರನ್ನು ಕಾಡುತ್ತಿದೆ. ಈ ಬಗ್ಗೆ ಅಧ್ಯಕ್ಷರು ಗಮನ ಹರಿಸಬೇಕು. ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಗಳ ಹೊಯ್ಸಳ ಮಾರುಕಟ್ಟೆ ಆವರಣದಲ್ಲಿ ಕಟ್ಟಡ ಸೋರುತ್ತಿದೆ. ಅದಕ್ಕೆ ನೀರು ಸೋರದಂತೆ ಕ್ರಮ ಕೈಗೊಳ್ಳಬೇಕು. ಹೈಮಾಸ್ಟ್ ದೀಪ ಪದೇ ಪದೆ ಕೆಡುತಿದ್ದು ದುರಸ್ತಿಗೆ ಮುಂದಾಗಬೇಕು. ಪಟ್ಟಣದ ಜನತೆಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್, ಪಟ್ಟಣದ ಮುಖ್ಯರಸ್ತೆಯಲ್ಲಿನ ವಾಹನಗಳ ದಟ್ಟಣೆಯ ಅನುಭವ ನಮಗೂ ಆಗಿದೆ. ರಸ್ತೆ ವಿಸ್ತರಣೆ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಕ್ರಮಕ್ಕೆ ಮುಂದಾಗಲಿದ್ದೇವೆ. ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಗಳಲ್ಲಿ ನೀರು ಸೋರುತ್ತಿರುವ ಬಗ್ಗೆ ನಮ್ಮ ಸದಸ್ಯರು ತಿಳಿಸಿದ್ದರು. ಶೀಘ್ರ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಘಟನೆ ತಾಲೂಕು ಕಾರ್ಯಾಧ್ಯಕ್ಷ ಲಕ್ಷ್ಮಣ್, ಉಪಾಧ್ಯಕ್ಷ ವಸಂತ ಕುಮಾರ್, ನಗರ ಉಪಾಧ್ಯಕ್ಷ ಸತೀಶ್, ಪ್ರದೀಪ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net