ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ನಿಖಿಲ್ ಕುಮಾರಸ್ವಾಮಿ ಅವರ ಸಿದ್ಧಾಂತ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರೀತಂ, ಅವರ ಸಿದ್ಧಾಂತ ಅವರದು, ನಮ್ಮ ಸಿದ್ಧಾಂತ ನಮ್ಮದು ಎಂದಷ್ಟೇ ಉತ್ತರಿಸಿದರು. ಇದೇ ವೇಳೆ ಮುಂದಿನ ಸಿಎಂ ಕುಮಾರಣ್ಣ ಎಂಬ ಮಾತಿಗೆ ಎನ್‌ಡಿಎ ನೇತೃತ್ವದಲ್ಲಿ ಸಿಎಂ ಆಗೋದು ಖಚಿತ, ಆದರೆ ಸಿಎಂ ಯಾರು ಎಂಬುದನ್ನು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡಲಿದ್ದಾರೆ. ಅವರ ಮನಸ್ಸಿನ ಇಚ್ಛೆಯನ್ನು ಅವರು ಹೇಳಿದ್ದಾರೆ ಎಂದರು.