ಶೀಘ್ರದಲ್ಲೇ ಅಂಬೇಡ್ಕರ್ ಪ್ರತಿಮೆ ಅನಾವರಣ

ಚನ್ನರಾಯಪಟ್ಟಣದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಪ್ರತಿಮೆಯನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ವೀಕ್ಷಿಸಿದರು. ಎಂ.ಎ.ಗೋಪಾಲಸ್ವಾಮಿ, ಜಿ.ಎಸ್.ಶಂಕರಪ್ಪ, ತ್ಯಾಗರಾಜ್, ನಾಗೇಶ್, ಧರ್ಮಯ್ಯ, ಪ್ರೇಮ್‌ಕುಮಾರ್, ಉಮಾಶಂಕರ್, ದೊರೆ, ಜಬೀವುಲ್ಲಾ ಬೇಗ್, ರವಿ, ಮಹೇಶ್ ಕಬ್ಬಾಳು ಇದ್ದರು.
ಚನ್ನರಾಯಪಟ್ಟಣದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಪ್ರತಿಮೆಯನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ವೀಕ್ಷಿಸಿದರು. ಎಂ.ಎ.ಗೋಪಾಲಸ್ವಾಮಿ, ಜಿ.ಎಸ್.ಶಂಕರಪ್ಪ, ತ್ಯಾಗರಾಜ್, ನಾಗೇಶ್, ಧರ್ಮಯ್ಯ, ಪ್ರೇಮ್‌ಕುಮಾರ್, ಉಮಾಶಂಕರ್, ದೊರೆ, ಜಬೀವುಲ್ಲಾ ಬೇಗ್, ರವಿ, ಮಹೇಶ್ ಕಬ್ಬಾಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ
ಚನ್ನರಾಯಪಟ್ಟಣ: ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸ್ಥಾಪಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಉದ್ಘಾಟನೆಯನ್ನು ಫೆಬ್ರವರಿ ಕೊನೆ ಇಲ್ಲವೇ ಮಾರ್ಚ್ ಆರಂಭದಲ್ಲಿ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಶನಿವಾರ ಕಾರ್ಯಕ್ರಮದ ಸಲುವಾಗಿ ಹೊಳೆನರಸಿಪುರಕ್ಕೆ ತೆರಳುವ ಮಾರ್ಗಮಧ್ಯೆ ಮಿನಿ ವಿಧಾನಸೌಧ ಎದುರು ನಿರ್ಮಿಸಲಾಗಿರುವ ಅಂಬೇಡ್ಕರ್ ಪ್ರತಿಮೆಯನ್ನು ವೀಕ್ಷಿಸಿ ಅವರು ಮಾತನಾಡಿದರು.
ಪ್ರತಿಮೆ ಅನಾವರಣಕ್ಕೆ ಜ.26ರಂದು ನಿಗದಿಯಾಗಿತ್ತು. ಉದ್ಘಾಟನೆಗೆ ತಾನು ಬರುವುದಾಗಿ ಹೇಳಿದ್ದೆ, ದಲಿತ ಮುಖಂಡರು ಮತ್ತು ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿ ಅವರು ನನ್ನ ಬಳಿ ಬಂದು ಗಣರಾಜ್ಯೋತ್ಸವ ದಿನದಂದು ತಮಗೆ ಹೆಚ್ಚು ಕಾರ್ಯಕ್ರಮಗಳಿರುತ್ತವೆ. ಸೂಕ್ತ ಸಮಯಕ್ಕೆ ಬರಲಾಗದು ಆದ್ದರಿಂದ ಉದ್ಘಾಟನೆಯನ್ನು ಮುಂದೂಡುವಂತೆ ಮನವಿ ಮಾಡಿದ್ದರು. ಆಗ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಉದ್ಘಾಟನೆಯನ್ನು ಮುಂದೂಡುವಂತೆ ಸೂಚಿಸಿದ್ದೆ. ಇದೀಗ ಜಿಲ್ಲಾ ಮಂತ್ರಿಗಳು, ಸ್ಥಳೀಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ದಿನಾಂಕ ತಿಳಿಸಲಿದ್ದಾರೆ ಎಂದರು.
ಪ್ರತಿಮೆಗೆ ಮಾಲಾರ್ಪಣೆ ಮಾಡಲು ಸುತ್ತಲೂ ನಿರ್ಮಾಣ ಮಾಡಲಾಗಿರುವ ಗ್ರಿಲ್‌ನಿಂದಾಗಿ ಅಂಬೇಡ್ಕರ್ ಅವರ ಮುಖದ ಭಾಗ ಸರಿಯಾಗಿ ಕಾಣುವುದಿಲ್ಲ, ಆದ್ದರಿಂದ ಅಡ್ಡವಾಗಿರುವ ಒಂದು ಕಂಬಿಯನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಬ್ಲಾಕ್ ಅಧ್ಯಕ್ಷ ಎಂ.ಕೆ.ಮಂಜೇಗೌಡ, ಭೀಮ್ ಅರ್ಮಿ ಜಿಲ್ಲಾಧ್ಯಕ್ಷ ಪ್ರಸನ್ನ, ಮುಖಂಡರಾದ ನಾಗೇಶ್, ಧರ್ಮಯ್ಯ, ಪ್ರೇಮ್‌ಕುಮಾರ್, ಉಮಾಶಂಕರ್, ದೊರೆ, ಜಬೀವುಲ್ಲಾ ಬೇಗ್, ರವಿ, ಮಹೇಶ್ ಕಬ್ಬಾಳು, ತಹಸೀಲ್ದಾರ್ ಶಂಕರಪ್ಪ, ಸಮಾಜ ಕಲ್ಯಾಣಾಧಿಕಾರಿ ತ್ಯಾಗರಾಜ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net