ಶ್ರೀಕಾಳೇಶ್ವರಸ್ವಾಮಿ, ಶ್ರೀಮಾಸ್ತಮ್ಮ ದೇವಿ ಅದ್ದೂರಿ ಜಾತ್ರಾ ಮಹೋತ್ಸವ
ಚಿಕ್ಕಕಣಗಾಲು ಗ್ರಾಮದ ಆರಾಧ್ಯದೈವ ಶ್ರೀಕಾಳೇಶ್ವರಸ್ವಾಮಿ ಮತ್ತು ಶ್ರೀಮಾಸ್ತಮ್ಮ ದೇವಿಯವರ 56ನೇ ವರ್ಷದ ಅದ್ದೂರಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
Published on:
Copied
Follow Us
ಆಲೂರು:ತಾಲೂಕಿನ ಚಿಕ್ಕಕಣಗಾಲು ಗ್ರಾಮದ ಆರಾಧ್ಯ ದೈವ ಶ್ರೀಕಾಳೇಶ್ವರಸ್ವಾಮಿ ಮತ್ತು ಶ್ರೀಮಾಸ್ತಮ್ಮ ದೇವಿಯವರ 56ನೇ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಮೇ 3 ಹಾಗೂ ಮೇ 4ರಂದು ಎರಡು ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮೇ 3ರಂದು ದೇವರುಗಳಿಗೆ ಅಭಿಷೇಕ ಮತ್ತು ರುದ್ರಾಭಿಷೇಕ ನೆರವೇರಿತು. ಮೇ 4ರಂದು ಬೆಳಗ್ಗೆ 6ರಿಂದ 7 ಗಂಟೆಯವರೆಗೂ ಮಹಾಮಂಗಳಾರತಿ, ಎಡೆಸೇವೆ ನಡೆಯಿತು. ನಂತರ 7 ಗಂಟೆಗೆ ದೇವಾಲಯ ಆವರಣದಲ್ಲಿ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಕೆಂಡೋತ್ಸವ ಜರುಗಿತು. ನಂತರ ಅನ್ನ ಸಂತರ್ಪಣೆ ನಡೆಯಿತು.
ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಂತೆ ಜಾತ್ರಾ ಮಹೋತ್ಸವ ಅಂಗವಾಗಿ ಚಿಕ್ಕಕಣಗಾಲು, ಜೆ.ತಿಮ್ಮನಹಳ್ಳಿ, ಜನ್ನಾಪುರ ಗ್ರಾಮಗಳಲ್ಲಿ ದೇವರುಗಳ ಅಡ್ಡೆಯನ್ನು ಹೊತ್ತು ಸಂಚರಿಸಿ ಮಡಿಲಕ್ಕಿ ಸೇವೆ ಸಲ್ಲಿಸಲಾಯಿತು. ಆ ಸಂದರ್ಭದಲ್ಲಿ ಚಾಮಗಳ ಕುಣಿತ ಎಲ್ಲರ ಕಣ್ಮನ ಸೆಳೆಯಿತು.
ಆಲೂರು ಠಾಣೆ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.