ಶೈಕ್ಷಣಿಕ ಕಲಿಕೆಗೆ ಆಕಾಶವಾಣಿ ಕಾರ್ಯಕ್ರಮ ಸಹಕಾರಿ

ಹಾಸನ ನಗರದ ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಕಾಶವಾಣಿ ಕೇಂದ್ರದ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಜಾತಾ ಎಸ್.ತಳವಾರ್, ಡಾ.ಬಿ.ವಿಕ್ರಂ, ಕೆ.ಸಿ.ನವೀನ್ ಇತರರಿದ್ದರು.
ಹಾಸನ ನಗರದ ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಕಾಶವಾಣಿ ಕೇಂದ್ರದ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಜಾತಾ ಎಸ್.ತಳವಾರ್, ಡಾ.ಬಿ.ವಿಕ್ರಂ, ಕೆ.ಸಿ.ನವೀನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶೈಕ್ಷಣಿಕ ಕಲಿಕೆಗೆ ಆಕಾಶವಾಣಿ ಕಾರ್ಯಕ್ರಮ ಸಹಕಾರಿ
  • ಮುಖ್ಯಸ್ಥೆ ಸುಜಾತಾ ಎಸ್.ತಳವಾರ್ ಅಭಿಪ್ರಾಯ
ಹಾಸನ: ವಿದ್ಯಾರ್ಥಿಗಳು ಆಕಾಶವಾಣಿ ಕಾರ್ಯಕ್ರಮಗಳನ್ನು ಆಲಿಸುವುದರಿಂದ ಶೈಕ್ಷಣಿಕ ಕಲಿಕೆಗೆ ಸಹಕಾರಿಯಾಗಲಿದೆ ಎಂದು ಹಾಸನ ಆಕಾಶವಾಣಿ ಮುಖ್ಯಸ್ಥೆ ಸುಜಾತಾ ಎಸ್.ತಳವಾರ್ ಅಭಿಪ್ರಾಯಪಟ್ಟರು.
ನಗರದ ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಹಾಸನ ಆಕಾಶವಾಣಿ ಕೇಂದ್ರದ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ನಡೆದ ರಸಪ್ರಶ್ನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರಲ್ಲಿ ಆಕಾಶವಾಣಿ ಕೇಳುವಿಕೆ ಕಡಿಮೆಯಾಗುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಕಾಶವಾಣಿ ಪ್ರಸಾರ ಮಾಡಿಕೊಂಡು ಬರುತ್ತಿದ್ದು, ಯುವಜನರಿಗೆ ಸಹಕಾರಿಯಾಗಿವೆ. ಬಿಡುವಿನ ವೇಳೆಯಲ್ಲಿ ಆಕಾಶವಾಣಿಯ ಕಾರ್ಯಕ್ರಮಗಳನ್ನು ಆಲಿಸಬೇಕು. ಅದರಲ್ಲೂ ಬಹುಮುಖ್ಯವಾಗಿ ವಿದ್ಯಾರ್ಥಿಗಳಿಗಾಗಿಯೇ ವಿನೂತನ ಶೈಕ್ಷಣಿಕ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನ ಆಡಳಿತಾಕಾರಿ ಡಾ.ಬಿ.ವಿಕ್ರಂ ಮಾತನಾಡಿ, ಆಕಾಶವಾಣಿಯನ್ನು ಪ್ರತಿನಿತ್ಯ ಆಲಿಸುತ್ತಿದ್ದ ಅನೇಕರು ಇಂದು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ನಾವು ಚಿಕ್ಕ ವಯಸ್ಸಿನಲ್ಲಿ ಆಕಾಶವಾಣಿಯಲ್ಲಿ ಬರುವ ಅತ್ಯುತ್ತಮ ಕಾರ್ಯಕ್ರಮ ಹಾಗೂ ಸುಮಧುರ ಗೀತೆಗಳನ್ನು ಆಲಿಸಿ ಜೀವನದಲ್ಲಿ ಒಂದಿಷ್ಟು ಒಳ್ಳೆಯ ಗುಣಗಳನ್ನು ಕಲಿಯಲು ಸಾಧ್ಯವಾಯಿತು. ಹಾಗೆಯೇ ಕನ್ನಡ ಭಾಷೆಯನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಕಲಿಯಲು ರೇಡಿಯೋ ಸಹಕಾರಿಯಾಯಿತು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಸಿ.ನವೀನ್ ಮಾತನಾಡಿ, ಆಕಾಶವಾಣಿ ವತಿಯಿಂದ ಕಾಲೇಜು ಹಂತಗಳಲ್ಲಿ ಇಂತಹ ಕಾರ್ಯಕ್ರಮಗಳ ನಡೆಸುವುದರಿಂದ ಇಂದಿನ ಮಕ್ಕಳನ್ನು ಮತ್ತೊಮ್ಮೆ ಆಕಾಶವಾಣಿ ಕಾರ್ಯಕ್ರಮಗಳ ಆಲಿಸುವಿಕೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಆಕಾಶವಾಣಿ ತಾಂತ್ರಿಕ ಸಹಾಯಕ ರಾಜು ಮ್ಯಾಥ್ಯು, ಉದ್ಘೋಷಕ ಷಣ್ಮುಖ, ತಾಂತ್ರಿಕ ಸಹಾಯಕಿ ಲಿಖಿತಾ, ಹಾಸನಂಬ ರೂರಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪಿ.ಎಸ್.ಮಂಜೇಗೌಡ, ಖಜಾಂಚಿ ಈಶ್ವರಪ್ಪ, ಆಡಳಿತಾಕಾರಿ ಡಾ.ಎಂ.ಡಿ. ನಿತ್ಯಾನಂದ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net